ಬಳಕೆದಾರರ ಆಕ್ರೋಶ | ಗೌಪ್ಯತೆಗೆ ಬದ್ಧವಾಗಿದ್ದೇವೆ : ಸ್ಟೇಟಸ್ ಹಂಚಿಕೊಂಡ ವಾಟ್ಸಪ್

Prasthutha|

ಮಂಗಳೂರು : ಬಳಕೆದಾರರ ಆಕ್ರೋಶದ ಹಿನ್ನೆಲೆಯಲ್ಲಿ ವಾಟ್ಸಪ್ ಇಂದು ಎಲ್ಲಾ ಬಳಕೆದಾರರ ಖಾತೆಗಳಲ್ಲಿ ಸ್ಟೇಟಸ್ ಹಂಚಿಕೊಂಡಿದ್ದು, ಗೌಪ್ಯತೆಗೆ ಬದ್ಧತೆಯನ್ನು ಖಚಿತಪಡಿಸಿಕೊಳ್ಳುವ ಯತ್ನ ನಡೆಸಿದೆ.

- Advertisement -

ವಾಟ್ಸಪ್ ಹೆಸರಿನ ಸಂಪರ್ಕದಿಂದ ನಾಲ್ಕು ಸ್ಟೇಟಸ್ ಪೋಸ್ಟ್ ಗಳ ಸೆಟ್ ನೀಡುವ ಮೂಲಕ, ವಾಟ್ಸಪ್ ತನ್ನ ಇತ್ತೀಚಿನ ಅಪ್ ಡೇಟ್ ನಂತರ ವೇದಿಕೆಯ ಸುರಕ್ಷತೆಯ ಬಗ್ಗೆ ಖಾತರಿಪಡಿಸಲು ಬಳಕೆದಾರರ ಗೌಪ್ಯತೆಯ ಬಗ್ಗೆ ಇರುವ ಕಾಳಜಿಗಳನ್ನು ದೂರಮಾಡಲು ಪ್ರಯತ್ನಿಸಿತು.

“ನಿಮ್ಮ ಗೌಪ್ಯತೆಗೆ ನಾವು ಬದ್ಧರಾಗಿದ್ದೇವೆ”, “ನಿಮ್ಮ ವೈಯಕ್ತಿಕ ಸಂಭಾಷಣೆಯನ್ನು ಓದಲು ಅಥವಾ ಕೇಳಲು ಸಾಧ್ಯವಿಲ್ಲ, ಏಕೆಂದರೆ ಅವು ಎಂಡ್ ಟು ಎಂಡ್ ಎನ್ಸ್ಕ್ರಿಪ್ಟ್ ಆಗಿರುತ್ತವೆ”, “ವಾಟ್ಸಪ್ ನಲ್ಲಿ ನೀವು ಹಂಚಿದ ಲೊಕೇಶ್ ಅನ್ನು ನೋಡಲು ಸಾಧ್ಯವಿಲ್ಲ” ಮತ್ತು “ವಾಟ್ಸಪ್ ನಿಮ್ಮ ಸಂಪರ್ಕಗಳನ್ನು ಫೇಸ್ ಬುಕ್ ನೊಂದಿಗೆ ಹಂಚಿಕೊಳ್ಳುವುದಿಲ್ಲ” ಎಂಬ ಸಂದೇಶಗಳನ್ನು ವಾಟ್ಸಪ್ ಹಂಚಿಕೊಂಡಿದೆ.

- Advertisement -

ತನ್ನ ಸೇವಾ ನಿಯಮಗಳು ಮತ್ತು ಸಾರ್ವಜನಿಕ ನೀತಿಯಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಕಳೆದ ವಾರ ವಾಟ್ಸಪ್ ಬಳಕೆದಾರರಿಗೆ ಮಾಹಿತಿ ನೀಡಿತ್ತು. ಈ ಬಗ್ಗೆ ಜಗತ್ತಿನಾದ್ಯಂತ ಭಾರೀ ಆಕ್ಷೇಪ ವ್ಯಕ್ತವಾಗಿತ್ತು. ಅಸಂಖ್ಯಾತ ಬಳಕೆದಾರರು ಬೇರೆ ಸಾಮಾಜಿಕ ಜಾಲತಾಣ ವೇದಿಕೆಗೆ ಶಿಫ್ಟ್ ಆಗಿದ್ದಾರೆ. ಹೀಗಾಗಿ, ಇಂದು ವಾಟ್ಸಪ್ ಈ ಬಗ್ಗೆ ಸ್ಪಷ್ಟನೆ ನೀಡಲು ಎಲ್ಲರ ಖಾತೆಗಳಲ್ಲಿ ಸ್ಟೇಟಸ್ ಹಂಚಿಕೊಂಡಿದೆ.



Join Whatsapp