ವಾಟ್ಸ್​​ ಆ್ಯಪ್ ಪಿಂಕ್ ಅಪಾಯಕಾರಿ: ಪೊಲೀಸರಿಂದ ಎಚ್ಚರಿಕೆ

Prasthutha|

ಬೆಂಗಳೂರು: ಸೈಬರ್ ವಂಚನೆಯ ಮತ್ತೊಂದು ಮುಖವನ್ನು ಕರ್ನಾಟಕ ಪೊಲೀಸರು ಪತ್ತೆಹಚ್ಚಿದ್ದು, ಯಾವುದೇ ಕಾರಣಕ್ಕೂ ಗುಲಾಬಿ ಬಣ್ಣದ ವಾಟ್ಸ್​​ಆ್ಯಪ್ ಅಥವಾ ವಾಟ್ಸ್​ ಆ್ಯಪ್ ಪಿಂಕ್ ಅನ್ನು ಇನ್​ ಸ್ಟಾಲ್ ಮಾಡದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

- Advertisement -

ಈ ವಿಚಾರವಾಗಿ ಎಕ್ಸ್​ ನಲ್ಲಿ ಎಚ್ಚರಿಕೆ ಸಂದೇಶ ಪ್ರಕಟಿಸಿರುವ ಕರ್ನಾಟಕ ಪೊಲೀಸ್, ಗುಲಾಬಿ ಬಣ್ಣದ ವಾಟ್ಸ್​ ಆ್ಯಪ್ ಅಪಾಯಕಾರಿ ಎಚ್ಚರಿಕೆಯಿಂದಿರಿ. ಆಕರ್ಷಣೆಯ ಗುಲಾಬಿ ಬಣ್ಣದ ವಾಟ್ಸ್​ ಆ್ಯಪ್ (Apk) ಬಳಸುವವರನ್ನು ಗುರಿಯಾಗಿಸಿ ಮೋಸಗಾರರು ಡೇಟಾ ಕದಿಯಲು ಇಲ್ಲವೇ ಆ್ಯಂಡ್ರಾಯ್ಡ್ ಮೊಬೈಲ್ ಹ್ಯಾಕ್ ಮಾಡಲು ಬಳಸಿಕೊಳ್ಳುತ್ತಾರೆ. ಜಾಗೃತೆಯಿಂದಿರಿ ಎಂದು ಉಲ್ಲೇಖಿಸಿದೆ.



Join Whatsapp