ವಾಟ್ಸ್’ಆ್ಯಪ್ ಪೇ ಭಾರತದ ಮುಖ್ಯಸ್ಥ ವಿನಯ್ ಚೊಲೆಟ್ಟಿ ರಾಜೀನಾಮೆ

Prasthutha|

ನವದೆಹಲಿ: ವಾಟ್ಸ್’ಆ್ಯಪ್ ಪೇ ಭಾರತದ ಮುಖ್ಯಸ್ಥ ವಿನಯ್ ಚೊಲೆಟ್ಟಿ ಬಡ್ತಿ ಪಡೆದ ನಾಲ್ಕೇ ತಿಂಗಳಿಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

- Advertisement -

ನವೆಂಬರ್’ನಲ್ಲಿ  ಮೆಟಾ ಕಂಪನಿಯ ಭಾರತದ ಮುಖ್ಯಸ್ಥ ಅಜಿತ್ ಮೋಹನ್ ರಾಜೀನಾಮೆ ಬಳಿಕ ಒಂದೂವರೆ ತಿಂಗಳಲ್ಲಿ  ಆದ ನಾಲ್ಕನೇ ರಾಜೀನಾಮೆ ಪ್ರಕರಣ ಇದಾಗಿದೆ.

ಮೋಹನ್ ಪದ ತ್ಯಾಗದ ಬಳಿಕ ವಾಟ್ಸ್’ಆ್ಯಪ್ ಇಂಡಿಯಾ ಮುಖ್ಯಸ್ಥರಾಗಿದ್ದ ಅಭಿಜಿತ್ ಬೋಸ್, ಮೆಟಾ ಇಂಡಿಯಾ ಪಬ್ಲಿಕ್ ಪಾಲಿಸಿ ಮುಖ್ಯಸ್ಥ ರಾಜೀವ್ ಅಗರ್ ವಾಲ್ ಸಹ ರಾಜೀನಾಮೆ ಸಲ್ಲಿಸಿದ್ದರು.

- Advertisement -

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಚೊಲೆಟ್ಟಿ, ಇಂದು ವಾಟ್ಸ್’ಆ್ಯಪ್ ಪೇನಲ್ಲಿ ನನ್ನ ಕೊನೆಯ ದಿನವಾಗಿತ್ತು. ಭಾರತದಲ್ಲಿ ವಾಟ್ಸ್ ಆ್ಯಪ್ ಪ್ರಭಾವ ಮತ್ತು ಅದರ ವ್ಯಾಪ್ತಿ ನೋಡಿದ್ದು ಉತ್ತಮ ಅನುಭವವಾಗಿದೆ  ಎಂದು ಬುಧವಾರ ಲಿಂಕ್ಡ್’ಇನ್’ನಲ್ಲಿ ಹಂಚಿಕೊಂಡಿದ್ದಾರೆ.

Join Whatsapp