ವಾಟ್ಸಪ್ ನಿಯಮಗಳಲ್ಲಿ ಬದಲಾವಣೆ : ಹೊಸ ಷರತ್ತು ಒಪ್ಪದಿದ್ದಲ್ಲಿ ಶೀಘ್ರವೇ ನಿಮ್ಮ ಖಾತೆ ಡಿಲೀಟ್!

Prasthutha|

ನವದೆಹಲಿ : ಜನಪ್ರಿಯ ಸಾಮಾಜಿಕ ಜಾಲತಾಣ ವೇದಿಕೆ ವಾಟ್ಸಪ್ ಈಗ ತನ್ನ ಸೇವಾ ನಿಯಮಗಳು ಮತ್ತು ಗೌಪ್ಯತೆ ನೀತಿಯಲ್ಲಿ ಬದಲಾವಣೆ ಮಾಡಿದ್ದು, ಅದರ ನೂತನ ನೀತಿಯನ್ನು ಒಪ್ಪದಿದ್ದರೆ ಖಾತೆಯೇ ಡಿಲೀಟ್ ಆಗುವ ಸಾಧ್ಯತೆಯಿದೆ.

- Advertisement -

ವಾಟ್ಸಪ್ ತನ್ನ ನಿಯಮಗಳನ್ನು ಮತ್ತು ಗೌಪ್ಯತೆ ನೀತಿಯನ್ನು ಅಪ್ ಡೇಟ್ ಮಾಡುತ್ತಿದೆ ಎಂದು ಕಂಪೆನಿ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಕಳುಹಿಸುತ್ತಿರುವ ಅಧಿಸೂಚನೆಯಲ್ಲಿ ತಿಳಿಸಿದೆ.

ಬಳಕೆದಾರರ ದತ್ತಾಂಶವನ್ನು ಹೇಗೆ ಪ್ರಕ್ರಿಯೆಗೊಳಿಸಲಾಗುತ್ತದೆ, ತಮ್ಮ ವಾಟ್ಸಾಪ್ ಚಾಟ್ ಗಳನ್ನು ಸಂಗ್ರಹಿಸಲು ಮತ್ತು ನಿರ್ವಹಿಸಲು ಫೇಸ್ ಬುಕ್ ಹೋಸ್ಟೆಡ್ ಸೇವೆಗಳನ್ನು ಹೇಗೆ ಬಳಸಬಹುದು ಮತ್ತು ವಾಟ್ಸಪ್ ನ ಮಾತೃಸಂಸ್ಥೆಯಾದ ಫೇಸ್ ಬುಕ್ ನೊಂದಿಗೆ ಕಂಪೆನಿ ಹೇಗೆ ಪಾಲುದಾರರಾಗಬಹುದು, ಫೇಸ್ ಬುಕ್ ಕಂಪೆನಿ ಉತ್ಪನ್ನದಾದ್ಯಂತ ಏಕೀಕರಣಗಳನ್ನು ಒದಗಿಸಲು ಹೇಗೆ ಬಳಸುತ್ತದೆ ಎಂಬ ಪ್ರಮುಖ ನವೀಕರಣಗಳನ್ನು ಸಹ ಅಧಿಸೂಚಿನೆಯು ಉಲ್ಲೇಖಿಸುತ್ತದೆ ಎಂಬ ಬಗ್ಗೆ ಮಾಹಿತಿಯನ್ನು WABetaInfo ವರದಿಯಲ್ಲಿ ಉಲ್ಲೇಖಿಸಲಾಗಿದೆ.

- Advertisement -

ವಾಟ್ಸಪ್ ನ ಹೊಸ ನಿಯಮಗಳು ಮತ್ತು ಗೌಪ್ಯತೆ ಫೆ.8ರಿಂದ ಜಾರಿಗೆ ಬರಲಿದೆ. ಬಳಕೆದಾರರು ಈ ನಿಯಮಗಳು ಮತ್ತು ಬದಲಾವಣೆಗಳನ್ನು ಸ್ವೀಕರಿಸಬೇಕಾಗುತ್ತದೆ. ಈ ಬದಲಾವಣೆಯನ್ನು ಒಪ್ಪದ ಬಳಕೆದಾರರ ವಾಟ್ಸಪ್ ಖಾತೆ ಡಿಲೀಟ್ ಆಗಲಿದೆ.



Join Whatsapp