ಕೇರಳದಲ್ಲಿ ಹಿಂದೂ ಐಎಎಸ್ ಅಧಿಕಾರಿಗಳಿಗಾಗಿಯೇ ವಾಟ್ಸ್ಆ್ಯಪ್ ಗ್ರೂಪ್..!

Prasthutha|

ತಿರುವನಂತಪುರ: ಹಿಂದೂ ಐಎಎಸ್ ಅಧಿಕಾರಿಗಳಿಗಾಗಿಯೇ ವಿಶೇಷವಾಗಿ ವಾಟ್ಸ್ ಆ್ಯಪ್ ಗ್ರೂಪ್ ರಚಿಸಲಾಗಿದೆ ಎಂಬ ವಿವಾದದ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸಲಿದೆ ಎಂದು ಕೇರಳ ಕೈಗಾರಿಕಾ ಸಚಿವ ಪಿ.ರಾಜೀವ್ ಸೋಮವಾರ ಹೇಳಿದರು.

- Advertisement -


‘ತಮ್ಮ ವೈಯಕ್ತಿಕ ದೂರವಾಣಿ ಸಂಖ್ಯೆಯನ್ನು ಹ್ಯಾಕ್ ಮಾಡಿ, ಅದನ್ನು ವಾಟ್ಸ್ಆ್ಯಪ್ನಲ್ಲಿ ಧಾರ್ಮಿಕ ಗುಂಪನ್ನು ರಚಿಸಲು ಬಳಸಲಾಗಿದೆ’ ಎಂದು ಐಎಎಸ್ ಅಧಿಕಾರಿಯೊಬ್ಬರು ಇತ್ತೀಚೆಗೆ ತಿರುವನಂತಪುರ ನಗರ ಪೊಲೀಸ್ ಆಯುಕ್ತರಿಗೆ ದೂರು ದಾಖಲಿಸಿದ್ದರು.


ಈ ಕುರಿತಂತೆ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜೀವ್, ‘ಇದೊಂದು ಗಂಭೀರ ವಿಷಯವಾಗಿದ್ದು, ಸಮುದಾಯ ಆಧಾರಿತ ವಿಭಜನೆಗಳು ಕಳವಳಕಾರಿಯಾಗಿದೆ’ ಎಂದು ಹೇಳಿದರು.
‘ಈ ಬಗ್ಗೆ ಸರ್ಕಾರ ಪರಿಶೀಲನೆ ನಡೆಸುತ್ತಿದೆ. ಐಎಎಸ್ ಅಧಿಕಾರಿಗಳಿಗೆ ಸಾಮಾನ್ಯ ನೀತಿ ಸಂಹಿತೆಯಿದ್ದು, ಅದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಡಿಯಲ್ಲಿ ಬರುತ್ತದೆ. ಪ್ರಸ್ತುತ ನಾವು ಘಟನೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಏನು ಮಾಡಬೇಕು ಎಂಬುವುದರ ಬಗ್ಗೆ ನಿರ್ಧರಿಸಲಿದ್ದೇವೆ’ ಎಂದರು.

- Advertisement -


ವಿವಾದಾತ್ಮಕ ವಾಟ್ಸಪ್ ಗ್ರೂಪ್ ಗೆ ಹಲವು ಐಎಎಸ್ ಅಧಿಕಾರಿಗಳನ್ನು ಸೇರಿಸಲಾಗಿದ್ದು, ಅದಕ್ಕೆ ‘ಹಿಂದೂ ಕಮ್ಯೂನಿಟಿ ಗ್ರೂಪ್’ ಎಂದು ಹೆಸರಿಲಾಗಿದೆ ಎಂದು ದೂರುದಾರ ಐಎಎಸ್ ಅಧಿಕಾರಿಯ ನಿಕಟವರ್ತಿಯೊಬ್ಬರು ತಿಳಿಸಿದ್ದಾರೆ.



Join Whatsapp