ಅನಂತಕುಮಾರ್ ಹೇಳಿರುವುದರಲ್ಲಿ ತಪ್ಪೇನಿದೆ: ಸಿಟಿ ರವಿ

Prasthutha|

ಚಿಕ್ಕಮಗಳೂರು: ಕಾಂಗ್ರೆಸ್ ಕಿರುಚಾಟ ನೋಡಿ ನಾನು ವಿಡಿಯೋ ನೋಡಿದೆ. ಅನಂತಕುಮಾರ್ ಹೆಗಡೆ ಹೇಳಿರುವುದರಲ್ಲಿ ತಪ್ಪೇನಿದೆ ಎಂದು ಬಿಜೆಪಿ ನಾಯಕ ಸಿಟಿ ರವಿ ಹೇಳಿದ್ದಾರೆ.

- Advertisement -


ಚಿಕ್ಕಮಗಳೂರು ನಗರದ ಪಾಂಚಜನ್ಯ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಿಟಿ ರವಿ, ಇವರ (ಕಾಂಗ್ರೆಸ್) ಕಿರುಚಾಟ ನೋಡಿ ಅನಂತಕುಮಾರ್ ಏನು ಹೇಳಿದ್ದಾರೆ ಎಂದು ನಾನು ವಿಡಿಯೋ ನೋಡಿದೆ. ಅನಂತಕುಮಾರ್ ಹೆಗಡೆ ಹೇಳಿರುವುದರಲ್ಲಿ ತಪ್ಪೇನಿದೆ? ಅಂಬೇಡ್ಕರ್ ಅವರು ಸಂವಿಧಾನದ ಮೂಲ ಪ್ರತಿಯಲ್ಲಿ ರಾಮನ ಚಿತ್ರ ಹಾಕಿದ್ದರು. ರಾಮನ ಚಿತ್ರ ಮೂಲ ಪ್ರತಿಯಲ್ಲಿ ಹಾಕಿದ ಉದ್ದೇಶವೇನು? ಇದು ರಾಮನ ಭೂಮಿ ಅಂತ ಅಂಬೇಡ್ಕರ್ ಅವರಿಗೂ ಗೊತ್ತಿತ್ತು ಎಂದರು.


ಸಂವಿಧಾನವನ್ನ 106 ಬಾರಿ ತಿದ್ದುಪಡಿ ಮಾಡಲಾಗಿದೆ. ಈ ಪೈಕಿ 95 ಬಾರಿ ತಿದ್ದುಪಡಿ ಮಾಡಿದ್ದು ಕಾಂಗ್ರೆಸ್ ಪಕ್ಷ. ಸಂವಿಧಾನ ತಿದ್ದುಪಡಿಗೆ ಸಂವಿಧಾನದಲ್ಲೇ ಅವಕಾಶವಿದೆ. ಆಂಬೇಡ್ಕರ್ ಆಶಯದಂತೆ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದರು. ಭಾರತ ರಾಷ್ಟ್ರವೇ ಅಲ್ಲ ಒಕ್ಕೂಟ ಅನ್ನುವವರು ಸಂವಿಧಾನ ವಿರೋಧಿಗಳು ಎಂದರು.



Join Whatsapp