RSS ಕಾರ್ಯಕರ್ತರು ಸೇನೆಗೆ ಸೇರಿದರೆ ತಪ್ಪೇನು: ಸುಧಾಕರ್

Prasthutha|

ಚಿಕ್ಕಬಳ್ಳಾಪುರ: ಆರ್ ಎಸ್ ಎಸ್ ಕಾರ್ಯರ್ತರು ಸೇನೆಗೆ  ಸೇರಿದರೆ ತಪ್ಪೇನಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪ್ರಶ್ನಿಸಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಗ್ನಿಪಥ್ ಯೋಜನೆ ಬಗ್ಗೆ ತಿಳಿದುಕೊಳ್ಳದೇ ಪ್ರತಿಪಕ್ಷಗಳು ಸುಮ್ಮನೇ ಸದ್ದು ಮಾಡುತ್ತಿದ್ದಾರೆ. ದೇಶದ ಮೇಲೆ ಅಭಿಮಾನ ಇರುವ ಪ್ರತಿಯೊಬ್ಬರೂ ಅಗ್ನಿಪಥ್ ಯೋಜನೆಯ ಅಗ್ನಿವೀರರಾಗಲು ಅರ್ಹರಿದ್ದಾರೆ. ಅದು ಆರ್ ಎಸ್ ಎಸ್ ಸೇರಿದಂತೆ ಯಾವುದೇ ಸಂಘಟನೆ ಸದಸ್ಯರಾದರೂ ಆಗಬಹುದು ಎಂದಿದ್ದಾರೆ. ನಾಲ್ಕು ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ಬಂದ ಯುವಕ ಯಾವುದೇ ಕೆಲಸಕ್ಕೆ ಸೇರಿದರೂ ಅಲ್ಲಿ ಶಿಸ್ತು, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುತ್ತಾರೆ. ದೇಶದ ಬಗ್ಗೆ ಅಭಿಮಾನ ತೋರುತ್ತಾರೆ ಎಂಬ ಜ್ಞಾನವೂ ಇವರಿಗಿಲ್ಲ ಎಂದು ಹೇಳಿದ್ದಾರೆ.



Join Whatsapp