ಪ್ರತಿಭಟನೆಯಲ್ಲಿ ಹಮಾಸ್ ನಾಯಕ ಪಾಲ್ಗೊಂಡರೆ ತಪ್ಪೇನು?: SYM ಮುಖ್ಯಸ್ಥ ಸುಹೈಬ್ ಸಿ.ಟಿ.

Prasthutha|

ಕೊಚ್ಚಿ: ಕೇರಳದ ಮಲಪ್ಪುರಂನಲ್ಲಿ ಶುಕ್ರವಾರ ಪ್ಯಾಲೆಸ್ತೀನ್ ನ ನಾಗರಿಕರ ಮೇಲೆ ಇಸ್ರೇಲ್ ನಡೆಸುತ್ತಿರುವ ಬಾಂಬ್ ದಾಳಿಯನ್ನು ಖಂಡಿಸಿ ಜಮಾತೆ ಇಸ್ಲಾಮಿ ಯುವ ಘಟಕ ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಮಾಸ್ ನಾಯಕ ಖಲೀದ್ ಮಶಾಲ್ ವರ್ಚುವಲ್ ಮೂಲಕ ಪಾಲ್ಗೊಂಡಿದ್ದರು. ಈ ಬಗ್ಗೆ ಕೇರಳದಲ್ಲಿ ಸಂಘಪರಿವಾರ ವ್ಯಾಪಕ ಚರ್ಚೆಯಾಗುವಂತೆ ಮಾಡಿದೆ. ಆದರೆ ಹಮಾಸ್ ನಾಯಕ ಭಾಗವಹಿಸಿದ್ದನ್ನು ಸಾಲಿಡಾರಿಟಿ ಯೂತ್ ಮೂವ್ಮೆಂಟ್ನ ರಾಜ್ಯಾಧ್ಯಕ್ಷ ಸುಹೈಬ್ ಸಿ.ಟಿ. ಸಮರ್ಥಿಸಿಕೊಂಡಿದ್ದಾರೆ. ಪ್ಯಾಲೆಸ್ಟೈನ್ ಜನರೊಂದಿಗೆ ಒಗ್ಗಟ್ಟು ವ್ಯಕ್ತಪಡಿಸಲು ಮತ್ತು ಇಸ್ರೇಲ್ ದಾಳಿಯನ್ನು ಖಂಡಿಸಲು ಆಯೋಜಿಸಲಾದ ನಮ್ಮ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು. ಇದರಲ್ಲಿ ಅಸಾಮಾನ್ಯವಾದುದನ್ನು ನೋಡುವ ಅಗತ್ಯವಿಲ್ಲ. ಎಂದು ತಿಳಿಸಿದ್ದಾರೆ.

- Advertisement -

ಹಮಾಸ್ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘಟನೆ ಅಥವಾ ನಿಷೇಧಿತ ಸಂಘಟನೆಯಲ್ಲ. ಆ ನಾಯಕನ ಭಾಗವಹಿಸುವಿಕೆ ಕಾನೂನಿನಡಿಯಲ್ಲಿ ಅಪರಾಧವಲ್ಲ. ಭಾರತದಲ್ಲಿ ಇನ್ನೂ ಅನೇಕ ಒಗ್ಗಟ್ಟಿನ ಕಾರ್ಯಕ್ರಮಗಳು ನಡೆಯಲಿದ್ದು, ಇದು ಸಂತ್ರಸ್ತ ಪ್ಯಾಲೆಸ್ತೀನ್ ಜನರಿಗೆ ಭಾರತೀಯರ ಬೆಂಬಲ ಸಾಬೀತುಪಡಿಸುತ್ತದೆ ಎಂದು ಸುಹೈಬ್ ಹೇಳಿದ್ದಾರೆ.



Join Whatsapp