ಕೋವಿಡ್19 ಎರಡನೇ ಅಲೆಯ ಪ್ರಭಾವ ಎಷ್ಟು ದಿನಗಳವರೆಗೆ ಇರಲಿವೆ ? ಸರಕಾರಕ್ಕೆ ತಜ್ಞರ ಸಲಹೆಯೇನು ?

Prasthutha|

ನವದೆಹಲಿ : ದೇಶದಾದ್ಯಂತ  ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ಸೋಂಕಿನ ಎರಡನೇ ಅಲೆಯ ಪ್ರಭಾವ 100 ದಿನಗಳವರೆಗೆ ಇರಲಿವೆಯೆಂದು ಸರಕಾರಕ್ಕೆ ದೆಹಲಿ ಪೋಲಿಸ್ ತಜ್ಞರು ಸಿದ್ದಪಡಿಸಿರುವ ಸಲಹೆಗಳಲ್ಲಿ ಹೇಳಲಾಗಿದೆ . ಶೇಕಡಾ 70 ರಷ್ಟು ಲಸಿಕೆ ಮತ್ತು ರೋಗ ನಿರೋಧಕ ಶಕ್ತಿ ಸಾಧಿಸುವವರೆಗೂ ಇಂತಹ ಅಲೆಗಳು ಬರುತ್ತಲೇ ಇರುತ್ತವೆ ಎಂದು ಸಮಿತಿ ಸೂಚಿಸಿದೆ .

- Advertisement -

ಲಸಿಕೆ ಪಡೆದ ನಂತರವೂ ಜನರಲ್ಲಿ ಸೋಂಕು ಕಾಣಿಸಿಕೊಳ್ಳಲಿದೆ., ಈ ಹೊಸ ರೂಪಾಂತರಿತ ಸೋಂಕು ಮನೆಯ ಒಬ್ಬ ಸದಸ್ಯನಿಗೆ ಅಂಟಿಕೊಂಡರೆ ಇಡೀ ಕುಟುಂಬವೂ ಸೊಂಕಿಗೆ ಒಳಗಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದೆ. ಸೋಂಕಿತ ವ್ಯಕ್ತಿಯೊಂದಿಗೆ 15 ನಿಮಿಷಗಳಿಗಿಂತ ಹೆಚ್ಚು ಕಾಲ ಸಂಪರ್ಕ ಬೆಳೆಸಿದರೆ ಸೋಂಕಿಗೆ ಒಳಾಗಾಗುವ ಸಾಧ್ಯೆತೆಯಿದೆ ಎಂದು ತಿಳಿಸಿದೆ.

ಮಧುಮೇಹ , ದೀರ್ಘಕಾಲದ ಮೂತ್ರಪಿಂಡ ಖಾಯಿಲೆಯಿಂದ ಬಳಲುತ್ತಿರುವವರು ಹೆಚ್ಚುವರಿ ಮುನ್ನಚ್ಚೆರಿಕೆ ವಹಿಸಿ , ಅತಿಯಾದ ವ್ಯಾಯಾಮ ನಡೆಸಬೇಕು. ಜಂಕ್ ಪುಡ್ ಸೇವನೆಯನ್ನು ತಪ್ಪಿಸಬೇಕು, ಜ್ಯೂಸ್, ಎಳನೀರು ಕುಡಿಯಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಸಲಹೆಯನ್ನು ನೀಡಿದೆ.

Join Whatsapp