ವಿದ್ಯುತ್ ಕದ್ದ ಕುಮಾರಸ್ವಾಮಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಏನಿದೆ?: ಸಿದ್ದರಾಮಯ್ಯ ಕಿಡಿ

Prasthutha|

ಮೈಸೂರು: ವಿದ್ಯುತ್ ಕದ್ದ ಕುಮಾರಸ್ವಾಮಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಏನಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಿಡಿಕಾರಿದ್ದಾರೆ.

- Advertisement -


ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯುತ್ ಕದ್ದ ಕುಮಾರಸ್ವಾಮಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಏನಿದೆ?, ಕುಮಾರಸ್ವಾಮಿ ವಿದ್ಯುತ್ ಕದ್ದಿದ್ದು ಸತ್ಯ ತಾನೇ?, ದಂಡ ಕಟ್ಟಿದ್ದು ಸತ್ಯ ತಾನೇ. ಕದ್ದಿದ್ದನ್ನು ಕುಮಾರಸ್ವಾಮಿ ಒಪ್ಪಿಕೊಂಡಿದ್ದು ಸತ್ಯ ತಾನೇ. ಇಂತವರಿಂದ ನಾವು ಏನು ಕೇಳಿಸಿಕೊಳ್ಳಬೇಕು ಹೇಳಿ ಎಂದು ಗರಂ ಆದರು.


ಪದೇ ಪದೇ ಕುಮಾರಸ್ವಾಮಿ ವಿಚಾರದಲ್ಲಿ ನನಗೆ ಪ್ರತಿಕ್ರಿಯೆ ಕೊಡಲು ಇಷ್ಟ ಇಲ್ಲ. ಕುಮಾರಸ್ವಾಮಿ ಹತಾಶಾರಾಗಿದ್ದಾರೆ. ಹೀಗಾಗಿ ಏನೇನೋ ಮಾತನಾಡುತ್ತಿದ್ದಾರೆ ಅಷ್ಟೇ ಎಂದು ಸಿಎಂ ಹೇಳಿದರು.



Join Whatsapp