ಪ್ರಧಾನಿ ಮೋದಿ ನಾಮಪತ್ರ ವೇಳೆ ಘೋಷಿಸಿದ ಆಸ್ತಿ ಎಷ್ಟು?

Prasthutha|

ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ಸ್ಪರ್ಧಿಸಲು ಇಂದು ನಾಮಪತ್ರ ಸಲ್ಲಿಸಿದ್ದು, ತಮ್ಮ ಬಳಿ ಇರುವ ಆಸ್ತಿಯ ವಿವರದ ಅಫಿಡವಿಟ್​ ಅನ್ನು ನಾಮಪತ್ರದ ಜೊತೆ ಸಲ್ಲಿಸಿದ್ದಾರೆ. ಪ್ರಧಾನಿ 3.02 ಕೋಟಿ ರೂಪಾಯಿ ಮೌಲ್ಯದ ಚರ ಆಸ್ತಿ ಹೊಂದಿದ್ದಾರೆ. 52,920 ರೂಪಾಯಿ ನಗದು ಅವರ ಬಳಿ ಇದೆ. 3 ಬಾರಿ ಸಿಎಂ, 2 ಸಲ ಪ್ರಧಾನಿಯ ಬಳಿ ಯಾವುದೇ ಜಮೀನು, ಮನೆ ಅಥವಾ ಕಾರು ಇಲ್ಲ.

- Advertisement -

2018-19 ರ ಆರ್ಥಿಕ ವರ್ಷದಲ್ಲಿ 11 ಲಕ್ಷ ರೂಪಾಯಿ ಆದಾಯ ತೆರಿಗೆ ಕಟ್ಟಿದ್ದ ಮೋದಿ ಅವರು 2022-23 ರಲ್ಲಿ 23.5 ಲಕ್ಷ ರೂಪಾಯಿ ಅಂದರೆ ದುಪ್ಪಟ್ಟು ಟ್ಯಾಕ್ಸ್​​ ಕಟ್ಟಿದ್ದಾರೆ.

ಪ್ರಧಾನ ಮಂತ್ರಿ ಎಸ್‌ಬಿಐನಲ್ಲಿ 2,85,60,338 ರೂ ಮೌಲ್ಯದ ಸ್ಥಿರ ಠೇವಣಿಯನ್ನೂ ಹೊಂದಿದ್ದಾರೆ. ಪ್ರಧಾನಿಯವರ ಬಳಿ 2,67,750 ರೂಪಾಯಿ ಮೌಲ್ಯದ ನಾಲ್ಕು ಚಿನ್ನದ ಉಂಗುರಗಳಿವೆ.

- Advertisement -

ವಾರಣಸಿಯಲ್ಲಿ ಜೂನ್ 1 ರಂದು ಮತದಾನ ನಡೆಯಲಿದೆ.



Join Whatsapp