ಜಾತ್ಯತೀತ ಅಂದರೆ ಏನು: ಜಿ.ಟಿ. ದೇವೇಗೌಡ ಪ್ರಶ್ನೆ

Prasthutha|

ಮೈಸೂರು: ಜಾತ್ಯತೀತ ಅಂದರೆ ಏನು? ಮೊದಲು ಹೇಳಿ.ಸಿದ್ದರಾಮಯ್ಯ ಜೊತೆ ಕುರುಬರು, ದೇವೇಗೌಡರ ಜೊತೆ ಒಕ್ಕಲಿಗರು, ಯಡಿಯೂರಪ್ಪ ಜೊತೆ ಲಿಂಗಾಯತರು, ಮಲ್ಲಿಕಾರ್ಜುನ ಖರ್ಗೆ ಜೊತೆ ದಲಿತರು ಮಾತ್ರ ಇರೋದು ಅಂದ್ರೆ ಜಾತ್ಯತೀತನಾ ಎಂದು ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಕಾಂಗ್ರೆಸ್‌ನ್ನು ಪ್ರಶ್ನಿಸಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಜಾತ್ಯತೀತವಾಗಿ ಉಳಿದಿಲ್ಲ ಎಂಬ ಕಾಂಗ್ರೆಸ್ ನಾಯಕರ ಟೀಕೆಗೆ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ.

ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಅವರು,ಗ್ಯಾರಂಟಿ ಯೋಜನೆ ಹೆಸರಿನಲ್ಲಿ ಆಸೆ ತೋರಿಸಿ ಹೆಣ್ಣು ಮಕ್ಕಳು ಕಣ್ಣೀರು ಹಾಕುವಂತೆ ರಾಜ್ಯ ಸರ್ಕಾರ ಮಾಡಿದೆ. ಈಗ ಗ್ಯಾರಂಟಿ ಯೋಜನೆಗಳ ಕಥೆ ಏನಾಗಿದೆ? ಗೃಹಲಕ್ಷ್ಮಿ ಯೋಜನೆಯ ಅರ್ಹ ಫಲಾನುಭವಿ ಮಹಿಳೆಯರಿಗೆ 2 ಸಾವಿರ ಹಣ ತಲುಪುತ್ತಿಲ್ಲ. ಈ ಕುರಿತು ಹೋದಲ್ಲಿ ಬಂದಲ್ಲಿ ಮಹಿಳೆಯರು ಅಳಲು ತೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

Join Whatsapp