ದರ್ಶನ್ & ಗ್ಯಾಂಗ್ ವಿರುದ್ಧದ ಚಾರ್ಜ್ ಶೀಟ್ ನಲ್ಲಿ ಏನಿದೆ?

Prasthutha|

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನ್ಯಾಯಾಲಯಕ್ಕೆ 3,991 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

- Advertisement -


24ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ಮಾರುತೇಶ್ ಪರಸುರಾಮ್ ಮೋಹಿತ್ ಅವರಿಗೆ ಒಂದು ಬಾಕ್ಸ್ ನಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.


ಚಾರ್ಜ್ ಶೀಟ್ ನಲ್ಲಿ ಒಟ್ಟಾರೆ 231 ಸಾಕ್ಷಿಗಳ ಉಲ್ಲೇಖ ಮಾಡಲಾಗಿದೆ. 27 ಜನ ಸಾಕ್ಷಿ, ಐ ವಿಟ್ನೆಸ್ 03, ಸಿಎಫ್ ಎಸ್ ಎಲ್ 8, 59 ಮಂದಿ ಪಂಚರ ಸಾಕ್ಷಿ, ಪೊಲೀಸರು – 56, ಸರ್ಕಾರಿ ಅಧಿಕಾರಿಗಳು – 8, ಎಫ್ ಎಸ್ ಎಲ್, ಸಿಎಫ್ ಎಸ್ ಎಲ್ 08, ಪ್ರತ್ಯಕ್ಷ ಸಾಕ್ಷಿಗಳು 03, ಪೊಲೀಸ್ರ ಎದುರು ಸಿಆರ್ ಪಿಸಿ 161 ಅಡಿ ಹೇಳಿಕೆ ದಾಖಲಿಸಿದ ವ್ಯಕ್ತಿಗಳು 97, ನ್ಯಾಯಾಧೀಶರ ಮುಂದೆ 164 ಹೇಳಿಕೆಯನ್ನು 27 ಮಂದಿ ದಾಖಲಿಸಿದ್ದಾರೆ.

- Advertisement -


ಚಾರ್ಜ್ ಶೀಟ್ ನಲ್ಲಿ ಆರೋಪಿಗಳನ್ನು ಯಥಾಸ್ಥಿತಿಯಲ್ಲಿ ಉಲ್ಲೇಖ ಮಾಡಲಾಗಿದೆ. ಪವಿತ್ರಗೌಡ -ಎ1, ದರ್ಶನ್ ಎ-2, 14 ಜನರ ಮೇಲೆ ಕೊಲೆ ಆರೋಪ, 14 ಜನರು ಮೇಲೂ ಅಪಹರಣ ಮತ್ತು ಕೊಲೆ ಆರೋಪ, ಮೂರು ಆರೋಪಿಗಳ ಮೇಲೆ ಮಾತ್ರ ಸಾಕ್ಷ್ಯ ನಾಶ ಕೇಸ್ ದಾಖಲಿಸಿರುವ ಬಗ್ಗೆ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ. ಕಾರ್ತಿಕ್ ಅಲಿಯಾಸ್ ಕಪ್ಪೆ, ಕೇಶವಮೂರ್ತಿ, ನಿಖಿಲ್ ನಾಯಕ್ ಈ ಮೂವರ ಮೇಲೆ ಮಾತ್ರ ಸಾಕ್ಷಿ ನಾಶ ಪ್ರಕರಣ ದಾಖಲಾಗಿದೆ.


ಕಿಡ್ನ್ಯಾಪ್, ಕೊಲೆ, ಸಾಕ್ಷಿ ನಾಶ, ಒಳಸಂಚು, ದರೋಡೆ, ಕಾನೂನುಬಾಹಿರ ಗುಂಪುಗಾರಿಕೆ ಪ್ರಕರಣ ದಾಖಲಾಗಿದೆ.



Join Whatsapp