‘ಅದೇ ಚಮಚವನ್ನು ಬಳಸಿದರೆ ಏನಾಗುತ್ತದೆ’?: ಸುಧಾ ಮೂರ್ತಿ ವಿರುದ್ಧ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ

Prasthutha|

ಕುನಾಲ್ ವಿಜಯಕರ ಸಾರಥ್ಯದ ‘ಖಾನೇ ಮೇ ಕ್ಯಾ ಹೈ?’ ಯೂಟ್ಯೂಬ್ ಸೀರೀಸ್ ನಲ್ಲಿ ಇತ್ತೀಚೆಗೆ ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರ ಪತ್ನಿ ಸುಧಾ ಮೂರ್ತಿ ಪಾಲ್ಗೊಂಡಿದ್ದರು.

- Advertisement -


ಆಹಾರದ ಬಗ್ಗೆ ಅನೇಕ ವಿಷಯಗಳನ್ನು ಚರ್ಚಿಸುತ್ತ, ‘ನಾನು ಶುದ್ಧ ಸಸ್ಯಾಹಾರಿ, ಬೆಳ್ಳುಳ್ಳಿ ಮತ್ತು ಮೊಟ್ಟೆಯನ್ನು ಕೂಡ ತಿನ್ನುವುದಿಲ್ಲ. ಏಕೆಂದರೆ ಮಾಂಸಾಹಾರ ಮತ್ತು ಸಸ್ಯಾಹಾರಕ್ಕೆ ಒಂದೇ ಚಮಚವನ್ನು ಬಳಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ವಿದೇಶಗಳಿಗೆ ಹೋಗುವಾಗ ಆಹಾರ ಪೊಟ್ಟಣಗಳನ್ನು ತೆಗೆದುಕೊಂಡು ಹೋಗುತ್ತೇನೆ. ಇಲ್ಲವೆ ಸಸ್ಯಾಹಾರಿ ರೆಸ್ಟೋರೆಂಟ್ ಗಳಿಗೆ ಹೋಗುತ್ತೇನೆ. ಅದೂ ಸಾಧ್ಯವಾಗದಿದ್ದರೆ ನಾನೇ ಅಡುಗೆ ಮಾಡಿ ತಿನ್ನುತ್ತೇನೆ’ ಎಂದಿದ್ದಾರೆ. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.


ಸುಧಾ ಮೂರ್ತಿ ಅವರ ಅಳಿಯ, ಯುಕೆ ಪ್ರಧಾನಿ ರಿಷಿ ಸುನಕ್ ಬಾರ್ಬೆಕ್ಯೂ ಮತ್ತು ಮಾಂಸದ ವಿವಿಧ ಭಕ್ಷ್ಯಗಳ ಮುಂದೆ ಪೋಸ್ ನೀಡುತ್ತಿರುವ ಕೆಲವು ಫೋಟೋಗಳನ್ನು ಬಳಕೆದಾರರೊಬ್ಬರು ಅಪ್ಲೋಡ್ ಮಾಡಿ, ರಿಷಿ ಸುನಕ್ ಅವರನ್ನು ಅಜ್ಜಿ ಸುಧಾ ಮೂರ್ತಿಯನ್ನು ಮುಟ್ಟಲು ಅನುಮತಿ ಇದೆಯೇ ಎಂದು ಕೇಳಿದ್ದಾರೆ.

- Advertisement -


“ನಾವು ಜನರನ್ನು ಅವರ ಆಹಾರ ಆದ್ಯತೆಗಳು ಅಥವಾ ಇತರ ವೈಯಕ್ತಿಕ ಅಭ್ಯಾಸಗಳ ಆಧಾರದ ಮೇಲೆ ನಿರ್ಣಯಿಸಬಾರದು. ಬದಲಾಗಿ, ಅವರ ಜಾತಿಯನ್ನು ಲೆಕ್ಕಿಸದೆ ಎಲ್ಲರನ್ನೂ ಗೌರವದಿಂದ ಕಾಣುವತ್ತ ನಾವು ಗಮನ ಹರಿಸಬೇಕು” ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.


ವ್ಯಕ್ತಿಯ ಆಹಾರ ಕ್ರಮ, ಜಾತಿ ಮತ್ತು ವೈಯಕ್ತಿಕ ವಿಚಾರಗಳನ್ನು ಗಣನೆಗೆ ತೆಗೆದುಕೊಳ್ಳದೆ ವ್ಯಕ್ತಿಯನ್ನು ಗೌರವದಿಂದ ಕಾಣುವ ಬಗ್ಗೆ ಯೋಚಿಸಬೇಕು ಎಂದಿದ್ದಾರೆ. ಆಹಾರವನ್ನು ಮನೆಯಿಂದ ತೆಗೆದುಕೊಂಡು ಹೋಗುತ್ತೀರಿ ಸರಿ, ಆದರೆ ಬೇರೆಯವರು ವಾಸವಾಗಿದ್ದ ಹೋಟೆಲ್ ಕೊಠಡಿಗಳ ವಿಷಯವಾಗಿ ಏನು ಹೇಳುತ್ತೀರಿ? ಎಂದು ಕೇಳಿದ್ದಾರೆ.



Join Whatsapp