ಸುನಕ್ ಆಯ್ಕೆ ಕೊಂಡಾಡುವವರು  ಎನ್ ಆರ್ ಸಿ, ಸಿಎಎಗಳ ಬಗ್ಗೆ ಏನು ಹೇಳುತ್ತಾರೆ?: ಮೆಹಬೂಬಾ ಮುಫ್ತಿ

Prasthutha|

ಬ್ರಿಟನ್ ಅಲ್ಪಸಂಖ್ಯಾತರ ವಿಶಿಷ್ಟತೆ ಒಪ್ಪಿಕೊಂಡಿದೆ, ನಾವು? ಕೇಂದ್ರವನ್ನು ಕೆಣಕಿದ ಮಾಜಿ ಸಿಎಂ

- Advertisement -

ನವದೆಹಲಿ: ಸುನಕ್ ರ ಗೆಲುವನ್ನು ಆಚರಿಸುವ ಭಾರತೀಯರು ಬ್ರಿಟನ್, ಅಲ್ಪಸಂಖ್ಯಾತರ ವಿಶಿಷ್ಟತೆಯನ್ನು ಒಪ್ಪಿಕೊಂಡಿರುವುದನ್ನು ನೆನಪು ಮಾಡಿಕೊಳ್ಳಬೇಕು. ಆದರೆ ನಾವು ಅಲ್ಪಸಂಖ್ಯಾತರ ವಿರುದ್ಧ ಈಗಲೂ ವಿಭಜಕ, ಶೋಷಕ ಎನ್ ಆರ್ ಸಿ, ಸಿಎಎಗಳಿಗೆ ಜೋತು ಬಿದ್ದಿದ್ದೇವೆ” ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಕೇಂದ್ರ ಸರ್ಕಾರ ಹಾಗೂ ಬಿಜೆಪಿಯನ್ನು ಕೆಣಕಿದ್ದಾರೆ.

ರಿಷಿ ಸುನಕ್ , ಬ್ರಿಟನ್  ಪ್ರಧಾನಿಯಾದುದಕ್ಕೆ ಬೀಗುವ ನೀವು ಇಲ್ಲಿ ಅಲ್ಪಸಂಖ್ಯಾತರಿಗೆ ಏನು ಮಾಡಿದ್ದೀರಿ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಕೇಂದ್ರವನ್ನು ಪ್ರಶ್ನಿಸಿದ್ದಾರೆ. ಸುನಕ್ ಆಯ್ಕೆ ಕೊಂಡಾಡುವವರು  ಎನ್ ಆರ್ ಸಿ, ಸಿಎಎಗಳ ಬಗ್ಗೆ ಏನು ಹೇಳುತ್ತಾರೆ? ಅವರು ಕೇಳಿದರು.

- Advertisement -

ಬ್ರಿಟಿಷ್ ತಾಯಿಯನ್ನು ಹೊಂದಿರುವ ನ್ಯಾಶನಲ್ ಕಾನ್ಫರೆನ್ಸ್ ನ ಉಮರ್ ಅಬ್ದುಲ್ಲಾ ಅವರು ಏನೂ ಹೇಳಿಲ್ಲವಾದರೂ ಬ್ರಿಟನ್ನಿನ ಮಾಜಿ ಚಾನ್ಸಲರ್ ಜಾರ್ಜ್ ಓಸ್ಬೋರ್ನ್ ರ ಟ್ವೀಟನ್ನು ಮರು ಟ್ವೀಟಿಸಿದ್ದಾರೆ.

“ದಿನದಂತ್ಯದಲ್ಲಿ ರಿಷಿ ಸುನಕ್ ಪ್ರಧಾನಿ. ನನ್ನಂತೆಯೇ ಕೆಲವರು ಈಗಿನ ಸಮಸ್ಯೆಗಳಿಗೆ ಆತ ಪರಿಹಾರ ಎಂದು ನಂಬಿದ್ದಾರೆ. ಮತ್ತೆ ಕೆಲವರು ರಿಷಿ ಸಮಸ್ಯೆಗಳ ಭಾಗ ಎಂದು ತಿಳಿದಿದ್ದಾರೆ. ಏನೇ ಆಗಲಿ ಏಷ್ಯಾದ ಮೊದಲ ಪ್ರಧಾನಿಯನ್ನು ಅಭಿನಂದಿಸೋಣ; ಇದೆಲ್ಲ ಬ್ರಿಟನ್ನಿನಲ್ಲಿ ಮಾತ್ರ ನಡೆಯಲು ಸಾಧ್ಯ.” ಇದು ಜಾರ್ಜ್ ಓಸ್ಬೋರ್ನ್ ರ ಟ್ವೀಟ್ ಆಗಿದೆ.

ಪ್ರಧಾನಿ ಮೋದಿ, ನಿರ್ಮಲಾ ಸೀತಾರಾಮನ್ ಸಹಿತ ಭಾರತದ ಸಾಕಷ್ಟು ಮಂದಿ ಸುನಕ್ ರನ್ನು ಅಭಿನಂದಿಸಿದ್ದಾರೆ.

“ದೊಡ್ಡ ವಿಷಯ, ಭಾರತೀಯರು ಎಲ್ಲ ಕಡೆ ತಮ್ಮ ಛಾಪು ಒತ್ತಿದ್ದಾರೆ. ಸಾಮ್ರಾಜ್ಯಶಾಹಿಯನ್ನು ಹಿಮ್ಮೆಟ್ಟಿಸಿದ ಸಾಧನೆ ನಿಮ್ಮದು.” ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್, ತೆಲುಗು ದೇಶಂ ಮೊದಲಾದ ಪಕ್ಷಗಳ ನಾಯಕರೂ ಇದನ್ನು ಸ್ವಾಗತಿಸಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಪ್ರಕಾರ ಅಮನ್ ಸೆಹ್ರಾವತ್ ರ ಕುಸ್ತಿ ಚಿನ್ನ, ಕೊಹ್ಲಿ ಸಿಕ್ಸರ್ ಮತ್ತು ಸುನಕ್ ಆಯ್ಕೆ ದೀಪಾವಳಿಯ ಹ್ಯಾಟ್ರಿಕ್.

ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮತ್ತು ಹಲವು ರಾಜ್ಯಗಳ ನಾಯಕರುಗಳೂ ಸುನಕ್ ರಿಗೆ ಶುಭ ಹಾರೈಸಿದ್ದಾರೆ.

“ಜಗತ್ತಿನಲ್ಲಿ ತುಂಬ ಅಪರೂಪವಾದುದನ್ನು ಬ್ರಿಟಿಷರು ಸಾಧಿಸಿದ್ದಾರೆ. ತೀರಾ ಅಲ್ಪಸಂಖ್ಯಾತ ಶಕ್ತಿಶಾಲಿ ಪೀಠದಲ್ಲಿ’ ಭಾರತೀಯರ ಹೆಮ್ಮೆ” ಎಂದು ಕಾಂಗ್ರೆಸ್ಸಿನ ಶಶಿ ತರೂರ್ ಟ್ವೀಟಿದ್ದಾರೆ.



Join Whatsapp