ಬೀಟ್ ರೂಟ್ ನಲ್ಲಿ ಅಧಿಕ ಕಾರ್ಬೋಹೈಡ್ರೇಟ್ ಮಟ್ಟವಿರಬಹುದು ಹಾಗೂ ತರಕಾರಿಗಳಲ್ಲೇ ಅತಿ ಹೆಚ್ಚು ಸಕ್ಕರೆ ಅಂಶವಿದೆ. ಆದರೆ, ಬೀಟ್ ರೂಟ್ ನಲ್ಲಿ ಹಲವಾರು ಪೋಷಕಾಂಶಗಳಿದ್ದು, ಅದರಿಂದ ನಿಮ್ಮ ಆರೋಗ್ಯವನ್ನು ಸುಧಾರಿಸುತ್ತದೆ.
ರಕ್ತದೊತ್ತಡ ಕಡಿಮೆ ಮಾಡುತ್ತದೆ
ಬೀಟ್ ರೂಟ್ ಜ್ಯೂಸ್ ಕುಡಿಯುವುದರಿಂದ ಕೆಲವೇ ಗಂಟೆಗಳಲ್ಲಿ ರಕ್ತದೊತ್ತಡ ಕಡಿಮೆಯಾಗುತ್ತದೆ. ಒಂದು ಲೋಟ ಬೀಟ್ ರೂಟ್ ಜ್ಯೂಸ್ ನಿಂದ 4 – 5 ಅಂಶಗಳಷ್ಟು ಸಂಕೋಚನ ರಕ್ತದೊತ್ತಡ ಕಡಿಮೆಯಾಗಿದೆ ಎಂದು ಒಂದು ವರದಿ ಹೇಳಿದೆ. ಇನ್ನು, ಅದರಲ್ಲಿರುವ ನೈಟ್ರಿಕ್ ಆಕ್ಸೈಡ್ ನಿಂದ ವಿಶ್ರಾಂತರಾಗಲು ಸಹಾಯ ಮಾಡುತ್ತದೆ, ರಕ್ತ ಸಂಚಲನ ಉತ್ತಮಗೊಳ್ಳುತ್ತದೆ ಹಾಗೂ ರಕ್ತದೊತ್ತಡ ಕಡಿಮೆ ಮಾಡುತ್ತದೆ.
ಶಕ್ತಿ ಹೆಚ್ಚಿಸುತ್ತದೆ
ಬೀಟ್ ರೂಟ್ ಜ್ಯೂಸ್ ಕುಡಿದು ನಂತರ ವ್ಯಾಯಾಮ ಮಾಡಿದರೆ ಶೇ. 15 ರಷ್ಟು ಹೆಚ್ಚು ಅವಧಿಯ ಕಾಲ ವ್ಯಾಯಾಮ ಮಾಡಬಹುದು.
ಉರಿಯೂತ ಸಮಸ್ಯೆಯನ್ನು ಎದುರಿಸುತ್ತದೆ
ಬೀಟ್ ರೂಟ್ ನಲ್ಲಿ ಬೀಟೈನ್ ಎಂಬ ಪೌಷ್ಟಿಕಾಂಶ ಪರಿಸರದ ಒತ್ತಡದಿಂದ ಜೀವಕೋಶಗಳು, ಪ್ರೋಟೀನ್ ಗಳು ಮತ್ತು ಕಿಣ್ವಗಳನ್ನು ರಕ್ಷಿಸುತ್ತದೆ. ಅಲ್ಲದೆ, ಉರಿಯೂತ ಸಮಸ್ಯೆ ವಿರುದ್ಧ ಹೋರಾಡಲು ರಕ್ಷಿಸುತ್ತದೆ ಹಾಗೂ ಆಂತರಿಕ ಅಂಗಗಳನ್ನು ರಕ್ಷಿಸುತ್ತದೆ.
ಪೌಷ್ಠಿಕಾಂಶಗಳು ಹಾಗೂ ನಾರಿನ ಅಂಶ ಹೆಚ್ಚಿರುತ್ತದೆ
ಬೀಟ್ ರೂಟ್ ಗಳಲ್ಲಿ ಪ್ರತಿರೋಧಕ ಉತ್ತೇಜನ ವಿಟಮಿನ್ ಸಿ ಅಂಶ, ನಾರಿನಂಶ ಹೆಚ್ಚಿದೆ. ಜತೆಗೆ, ಮ್ಯಾಂಗನೀಸ್ ಇದ್ದು, ಇದರಿಂದ ನಿಮ್ಮ ಮೂಳೆಗಳು, ಯಕೃತ್ತು, ಕಿಡ್ನಿಗಳು ಹಾಗೂ ಪ್ಯಾಂಕ್ರಿಯಾಗೆ ಒಳ್ಳೆಯದು. ಅಲ್ಲದೆ, ವಿಟಮಿನ್ ಬಿ, ಫೋಲೇಟ್ ಅಂಶದಿಂದ ಜನ್ಮ ದೋಷಗಳ ಅಪಾಯ ಕಡಿಮೆ ಮಾಡುತ್ತೆ.