ಮೈಸೂರನ್ನು ಪ್ಯಾರಿಸ್ ಮಾಡುವ ನಿಮ್ಮ ಯೋಜನೆ ಏನಾಗಿದೆ?: ಮೋದಿಗೆ ಪ್ರಗತಿಪರರ ತರಾಟೆ

Prasthutha|

ಮೈಸೂರು: ಮೈಸೂರನ್ನು ಪ್ಯಾರಿಸ್ ಮಾಡುವುದಾಗಿ ಭರವಸೆ ನೀಡಿದ ಪ್ರಧಾನಿ ಮೋದಿ ಅವರು ಇದರ ಬಗ್ಗೆ ಯಾವುದೇ ಯೋಜನೆ ರೂಪಿಸದ ನಡೆಯನ್ನು ಎಡ ಪಕ್ಷ, ದಲಿತ, ರೈತ ಮತ್ತು ಪ್ರಗತಿಪರ ಸಂಘಟನೆಗಳು ತರಾಟೆಗೆ ತೆಗೆದುಕೊಡಿದ್ದು, ಈ ಸಂಬಂಧವಾಗಿ ನಗರದ ಗಾಂಧಿ ಚೌಕದಲ್ಲಿ ಜೂನ್ 19 ರಂದು ಸಂಯುಕ್ತವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಬಿ. ರಾಮಕೃಷ್ಣ ತಿಳಿಸಿದ್ದಾರೆ.

- Advertisement -

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಂಸ್ಕೃತಿಕ ನಗರಿಯನ್ನು ಪ್ಯಾರಿಸ್ ಮಾದರಿಯಲ್ಲಿ ರೂಪಿಸುವಲ್ಲಿ ಯೋಜನೆ ಹಾಕಲಾಗುವುದೆಂದು ಹೇಳಿದ ನೀವು ಇದಕ್ಕಾಗಿ ಎಷ್ಟು ಹಣ ನೀಡಿದ್ದೀರಿ?. ಯಾವ ಯೋಜನೆಯನ್ನು ರೂಪಿಸಿದ್ದೀರಿ ಎಂದು ಬಹಿರಂಗಪಡಿಸಿ ಎಂದು ಪ್ರಧಾನಿ ಮೋದಿಗೆ ಸವಾಲೆಸೆದಿದ್ದಾರೆ. ಎರಡು ದಿನಗಳ ರಾಜ್ಯ ಪ್ರವಾಸ ನಡೆಸುತ್ತಿರುವ ಅವರು ಇದಕ್ಕೆ ಸಂಬಂಧಿಸಿದಂತೆ ಲೆಕ್ಕವನ್ನು ಸಾರ್ವಜನಿಕರ ಮುಂದಿಡಲಿ ಎಂದು ಅವರು ಆಗ್ರಹಿಸಿದ್ದಾರೆ.

ಮೈಸೂರಿನಲ್ಲಿ ಕೈಗಾರಿಕೆ ಮತ್ತು ಉದ್ಯೋಗ ಅವಕಾಶಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೈಸೂರು-ಕುಶಾಲನಗರ, ಮೈಸೂರು-ಮೆಟ್ಟಿಪಾಳ್ಯಂ ಹಾಗೂ ನಂಜನಗೂಡು-ನೀಲಂಬೂರು ರೈಲು ಮಾರ್ಗ ಯೋಜನೆಗಳು ಯಾವ ಸ್ಥಿತಿಯಲ್ಲಿದೆ ಎಂಬುವುದನ್ನು ಜನರಿಗೆ ಬಹಿರಂಗಪಡಿಸಲಿ ಎಂದ ಸಿಪಿಐ ಜಿಲ್ಲಾ ಕಾರ್ಯದರ್ಶಿ ಮೈಸೂರಿನಲ್ಲಿ ಸರ್ಕಾರಿ ಒಡೆತನದ ಸಂಸ್ಥೆಗಳನ್ನು ಮಾರಾಟ ಮಾಡಬಾರದು. ಲಲಿತಮಹಲ್ ಅರಮನೆ ಒಳಗೊಂಡಂತೆ ಯಾವುದೇ ಸರ್ಕಾರದ ಕಾಲದಲ್ಲಿ ನಿರ್ಮಾಣಗೊಂಡಿಲ್ಲ ಎಂದು ತಿಳಿಸಿದ್ದಾರೆ.

- Advertisement -

ಪತ್ರಿಕಾಗೋಷ್ಠಿಯಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ಎಸ್.ಯು.ಸಿ.ಐ ಜಿಲ್ಲಾ ಕಾರ್ಯದರ್ಶಿ ರವಿ, ಸಿಪಿಐಎಂಎಲ್ ಜಿಲ್ಲಾ ಕಾರ್ಯದರ್ಶಿ ಚೌಡಳ್ಳಿ ಜವರಯ್ಯ ಮತ್ತು ಐ.ಎನ್.ಟಿ.ಯು.ಸಿ. ಜಿಲ್ಲಾಧ್ಯಕ್ಷ ಎಂ. ಅನಿಲ್ ಕುಮಾರ್ ಉಪಸ್ಥಿತರಿದ್ದರು.

Join Whatsapp