ಕೇಂದ್ರ ಸರಕಾರದ ವಿರುದ್ಧ ಕಾನೂನು ಸಮರದ ಎಚ್ಚರಿಕೆ ನೀಡಿದ WFI ಅಧ್ಯಕ್ಷ ಸಂಜಯ್ ಸಿಂಗ್!

Prasthutha|

ನವದೆಹಲಿ: ಭಾರತೀಯ ಕುಸ್ತಿ ಫೆಡರೇಷನ್ ಅನ್ನು ಅಮಾನತು ಮಾಡಿರುವ ಕೇಂದ್ರ ಕ್ರೀಡಾ ಸಚಿವಾಲಯದ ನಿರ್ಧಾರ ಸರಿಯಲ್ಲ ಎಂದ ಡಬ್ಲ್ಯುಎಫ್‌ಐಯ ನೂತನ ಅಧ್ಯಕ್ಷ ಸಂಜಯ್ ಸಿಂಗ್, ಅಮಾನತು ಅದೇಶ ವಾಪಸ್ ಪಡೆಯದಿದ್ದರೆ ಸರ್ಕಾರದ ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದಿದ್ದಾರೆ.

- Advertisement -

ಕ್ರೀಡಾ ಸಚಿವಾಲಯ ಸರಿಯಾದ ಕಾರ್ಯವಿಧಾನ’ವನ್ನು ಅನುಸರಿಸಿಲ್ಲ. ಡಬ್ಲ್ಯುಎಫ್‌ಐ ಹೇಳುವುದನ್ನು ಕೇಳದೆ ಅವರ ಸ್ವಾಯತ್ತ ಮತ್ತು ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸಂಸ್ಥೆಯನ್ನು ಸರ್ಕಾರವು ಅಮಾನತುಗೊಳಿಸಲು ಸಾಧ್ಯವಿಲ್ಲ ಎಂದು ಸಂಜಯ್ ಹೇಳಿದ್ದಾರೆ.

ಮಾಧ್ಯಮ ಜತೆ ಮಾತನಾಡಿದ ಸಂಜಯ್ ಸಿಂಗ್, ಚುನಾವಣೆಯಲ್ಲಿ ಪ್ರಜಾಸತ್ತಾತ್ಮಕವಾಗಿ ಗೆದ್ದಿದ್ದೇವೆ. ರಿಟರ್ನಿಂಗ್ ಆಫೀಸ‌ರ್ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಾಧೀಶರಾಗಿದ್ದರು. ಐಒಎ ಮತ್ತು ಯುನೈಟೆಡ್ ವರ್ಲ್ಡ್ ಪ್ರೆಸ್ಲಿಂಗ್ ಯಿಂದ ವೀಕ್ಷಕರು ಇದ್ದರು. 22 ರಾಜ್ಯ ಘಟಕಗಳು, 25 ರಾಜ್ಯ ಸಂಘಗಳಲ್ಲಿ ಮೂರು ಗೈರುಹಾಜರಿಯಾಗಿದ್ದು ಚುನಾವಣೆಯಲ್ಲಿ ಭಾಗವಹಿಸಿದ್ದವು. 47 ಮತಗಳು ಚಲಾವಣೆಯಾಗಿ ಅದರಲ್ಲಿ ನನಗೆ 40 ಬಂದಿದೆ ಎಂದು ಹೇಳಿದ್ದಾರೆ.

- Advertisement -

ಇಷ್ಟೆಲ್ಲಾ ಆದ ಬಳಿಕವೂ ನಮ್ಮನ್ನು ಅಮಾನತುಗೊಳಿಸಲಾಗಿದೆ ಎಂದು ನೀವು ಹೇಳಿದರೆ, ನಾವು ಅದನ್ನು ಸ್ವೀಕರಿಸಲು ಹೋಗುವುದಿಲ್ಲ. ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸಂಸ್ಥೆ ತನ್ನ ನಿಲುವನ್ನು ವಿವರಿಸಲು ಅವಕಾಶವನ್ನು ನೀಡಲಿಲ್ಲ, ಅದು ಸಂವಿಧಾನದ ಅಡಿಯಲ್ಲಿ ಎಲ್ಲರಿಗೂ ಅರ್ಹವಾದ ನೆಲದ ನ್ಯಾಯದ ತತ್ವಕ್ಕೆ ವಿರುದ್ಧವಾಗಿದೆ ಎಂದಿದ್ದಾರೆ.

Join Whatsapp