ನಿರ್ಮಲಾ ಸೀತಾರಾಂ ಅಹಂಕಾರವನ್ನು ಮೊದಲು ಕೂಡ ನಾವು ನೋಡಿದ್ದೇವೆ: ದಿನೇಶ್ ಗುಂಡೂರಾವ್

Prasthutha|

ವಿಜಯಪುರ: ಜಿಎಸ್ ಟಿ ಹಣದ ವಿಚಾರದಲ್ಲಿ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ಹೇಳಿಕೆ ನೀಡಿದ್ದಾರೆ. ‘ಅವರ ಅಹಂಕಾರ ಎಂಥದ್ದು ಎಂದು ಮೊದಲು ಕೂಡ ನಾವು ನೋಡಿದ್ದೇವೆ ಎಂದುಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೇಂದ್ರ ಹಣಕಾಸು ಸಚಿವೆಯ ಕಿಡಿಗಾರಿದ್ದಾರೆ.

- Advertisement -

ವಿಜಯಪುರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವರ ಅಹಂಕಾರ ಎಂಥದ್ದು ಎಂದು ಮೊದಲು ಕೂಡ ನಾವು ನೋಡಿದ್ದೇವೆ. ಜಿಎಸ್‌ಟಿ ವಿಚಾರವಾಗಿ ನಾವು ಸ್ಪಷ್ಟವಾದಂತಹ ಮಾಹಿತಿಗಳನ್ನ ಜನರ ಮುಂದೆ ಇಟ್ಟಿದ್ದೇವೆ. ಹೇಗೆ ನಮಗೆ ನಷ್ಟ ಆಗಿದೆ, ಎಷ್ಟರಮಟ್ಟಿಗೆ ನಷ್ಟ ಆಗಿದೆ ಅನ್ನೋದನ್ನು ಹಾಗೂ ನಮ್ಮ ರಾಜ್ಯಕ್ಕೆ ಏನು ಕೊಡಬೇಕು ಅನ್ನೋದನ್ನು ಕೇಂದ್ರದ ಫೈನಾನ್ಸ್‌ ಕಮಿಷನ್‌ ರೆಕಮೆಂಡ್‌ ಮಾಡಿರುವಂತಹದ್ದು ಆಗಿದೆ. ಆದರೆ ನಮ್ಮ ರಾಜ್ಯವನ್ನು ಪ್ರತಿನಿಧಿಸುವ ನಿರ್ಮಲಾ ಸೀತಾರಾಮನ್‌ ಅವರು ಕೇಂದ್ರ ಬಜೆಟ್‌ನಲ್ಲಿ ಘೋಷಣೆಯಾಗಿರುವಂತಹ ಯೋಜನೆಗಳಿಗೆ ಹಣ ಕೊಡದೇ ಇರುವಂತಹದ್ದು ಇದೆಲ್ಲದರ ಸ್ಪಷ್ಟ ನಿರ್ದಿಷ್ಟವಾದಂತಹ ಮಾಹಿತಿಗಳು ಇದೆ ಎಂದರು.

ದೇಶಲ್ಲೇ ಅತೀ ಹೆಚ್ಚು ಎಫ್‌ಡಿಐ ಬರುವಂತಹ ರಾಜ್ಯ ಕರ್ನಾಟಕವಾಗಿದೆ. ಇಷ್ಟೇಲ್ಲಾ ಇದ್ದಾಗ ಕೇಂದ್ರ ಹಣಕಾಸು ಸಚಿವರು ಜಿಎಸ್ಟಿ ಹಣದ ವಿಚಾರದಲ್ಲಿ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಗೂಬೆ ಕೂಡಿಸುತ್ತಿದೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಆದರೆ ಕೇಂದ್ರ ವಿತ್ತ ಸಚಿವರಾಗಿ ನಮ್ಮ ಸಮಸ್ಯೆಯನ್ನು ಬಗೆ ಹರಿಸುವುದನ್ನು ಬಿಟ್ಟು, ಮೇಲಾಗಿ ನಮ್ಮ ರಾಜ್ಯದ ಪ್ರತಿನಿಧಿಯಾಗಿ ನಮ್ಮ ರಾಜ್ಯದ ರಾಜ್ಯಸಭೆ ಸದಸ್ಯೆಯಾಗಿ ಈ ರೀತಿ ಮಾತನಾಡುವುದು ಯಾಕೆ? ಅವರಿಗೆ ಅಷ್ಟೂ ಕೂಡ ಜವಾಬ್ದಾರಿ ಇಲ್ಲವೆ ಎಂದು ವಾಗ್ದಾಳಿ ನಡೆಸಿದರು.

- Advertisement -

ನಿರ್ಮಲಾ ಸೀತಾಮನ್ ಅವರ ಮಾತುಗಳು ಅಹಂಕಾರದ ಪರಮಾವಧಿಯಾಗಿವೆ. ನನ್ನನ್ನು ಮೀರಿಸೋರು ಯಾರೂ ಇಲ್ಲ ಅಂತಾ ಅವರು ತಿಳ್ಕೊಂಬಿಟ್ಟಿದ್ದಾರೆ. ನನಗೆ ಹೇಳೋರು ಯಾರೂ ಇಲ್ಲ ಅಂತ ಅಂದುಕೊಂಡಿದ್ದಾರೆ. ಅದು ಒಳ್ಳೆಯದಲ್ಲ, ಸ್ವಭಾವ ಆ ರೀತಿ ಇರಬಾರದು ಎಂದು ಕಿವಿ ಮಾತು ಹೇಳಿದರು.

ಯಾವತ್ತೂ ಕೂಡ ನಮ್ಮ ಒಕ್ಕೂಟದ ವ್ಯವಸ್ಥೆಯಲ್ಲಿ ಒಂದು ವಿಶ್ವಾಸದಿಂದ ನಾವು ಕೆಲಸ ಮಾಡಬೇಕು. ನಮ್ಮ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯಗಳನ್ನ ಎಷ್ಟು ಸಲ ಹೇಳಿದರೂ ಕೂಡ ಕಿವಿಗೊಡದ ಕಾರಣ ನಾವು ಬೀದಿಗೀಳಿಯಬೇಕಾಯಿತು ಎಂದರು.

ಮೂರು ವರ್ಷದಿಂದ ಹೇಳುತ್ತಿದ್ದೇವೆ, ಈಗಲಾದರೂ ಅದನ್ನ ಸರಿಪಡಿಸುವ ಕೆಲಸವಾಗಬೇಕು ಎಲ್ಲರೂ ಸೇರಿ ಸರಿ ಮಾಡಬೇಕು. ಯಾವುದೇ ವ್ಯವಸ್ಥೆಯಲ್ಲಿ ತಾರತಮ್ಮ ಆಗಿರಬಹುದು ಅದನ್ನು ಸರಿಪಡಿಸುವ ಕೆಲಸವಾಗಬೇಕು. ಎಲ್ಲವೂ ಹಂಡ್ರೆಡ್‌ ಪರ್ಸೆಂಟ್‌ ಕರೆಕ್ಟ್‌ ಇರಲ್ಲ. ಈ ತರಹ ಸಮಸ್ಯೆಗಳು ಇದೆ ಅಂತ ಹೇಳಿದಾಗ ನಮ್ಮ ಮಾತಿಗೆ ಕಿವಿಗೊಡಬೇಕು. ಆಯ್ತು ಇದನ್ನ ಸರಿಪಡಿಸುತ್ತೇವೆ, ಮುಂದೆ ಏನಾದರೂ ಇದಕ್ಕೆ ಮಾಡೋಣ ಎಂದು ಸರಿಪಡಿಸುವ ಕೆಲಸ ಮಾಡಬೇಕು ಎಂದರು.

ಎಲ್ಲವೂ ನಿಮ್ಮದೇ ತಪ್ಪು, ನಮ್ದೇನೂ ತಪ್ಪಿಲ್ಲ ಎಂದು ಮಾತಾಡುವುದು ಸರಿ ಅಲ್ಲ ಎಂದರು.

Join Whatsapp