ಇಂದು ಅರ್ಜಿ ಸಲ್ಲಿಸಿ, ಮರುದಿನ ವಿಚ್ಛೇದನ ಪಡೆಯುವ ಪಾಶ್ಚಾತ್ಯ ಸಂಸ್ಕೃತಿ ಅಳವಡಿಸಿಕೊಳ್ಳಲಾಗದು: ಸುಪ್ರೀಂ ಕೋರ್ಟ್

Prasthutha|

ನವದೆಹಲಿ: ಭಾರತೀಯ ಕಾನೂನು ವ್ಯವಸ್ಥೆಯಲ್ಲಿ, ವಿವಾಹ ರದ್ದುಗೊಳಿಸಲು ಇಲ್ಲವೇ ರಾಜಿ ಸಂಧಾನಕ್ಕೆ ಆದೇಶಿಸಲು ವಿಚ್ಛೇದನ ಪ್ರಕ್ರಿಯೆ ನಡುವೆ ಅಂತರ ಇರಬೇಕು ಎಂದು ಸುಪ್ರೀಂ ಕೋರ್ಟ್‌ ಗುರುವಾರ ಒತ್ತಿ ಹೇಳಿದೆ.

- Advertisement -

ವಿಚ್ಛೇದನಕ್ಕಾಗಿ ತ್ವರಿತ ಅನುಮತಿ ನೀಡುವ ಪಾಶ್ಚಾತ್ಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎ ಎಸ್ ಓಕಾ ಅವರಿದ್ದ ಪೀಠ ತಿಳಿಸಿತು.

“ನೀವು ಈ ದಿನ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿ ಮರುದಿನ ಅದಕ್ಕೆ ಅನುಮೋದನೆ ನೀಡುವಂತಹ ಪಾಶ್ಚಾತ್ಯ ವ್ಯವಸ್ಥೆ ನಮ್ಮಲ್ಲಿಲ್ಲ. ಇಲ್ಲಿ ಎರಡೂ ಕಡೆಯ ಪಕ್ಷಕಾರರು (ವಿವಾಹವನ್ನು ಉಳಿಸಲು) ಪ್ರಯತ್ನಿಸಬೇಕು ಎಂದು ನಾನು ಭಾವಿಸುತ್ತೇನೆ, ನಾವು ಪಾಶ್ಚಾತ್ಯ ತಾತ್ವಿಕತೆಯನ್ನು ಆಮದು ಮಾಡಿಕೊಳ್ಳಲಾಗದು” ಎಂದು ನ್ಯಾಯಮೂರ್ತಿ ಕೌಲ್ ತಿಳಿಸಿದರು.

- Advertisement -

ತನ್ನೆದುರು ವರ್ಗಾವಣೆ ಅರ್ಜಿ ಸಲ್ಲಿಸಿದ್ದ ದಂಪತಿಗೆ ಖಾಸಗಿ ರಾಜೀ ಸಂಧಾನ ಪ್ರಕ್ರಿಯೆಗೆ ಮುಂದಾಗುವಂತೆ ಆದೇಶಿಸುವ ಸಂದರ್ಭದಲ್ಲಿ ನ್ಯಾಯಾಲಯ ಈ ವಿಚಾರ ತಿಳಿಸಿತು. ಸಂವಿಧಾನದ 142ನೇ ವಿಧಿಯ ಅಡಿಯಲ್ಲಿ ಮದುವೆ ರದ್ದುಗೊಳಿಸಲು ವಿವಾಹಿತ ದಂಪತಿ ಒಟ್ಟಿಗೆ ಇದ್ದ 40 ದಿನಗಳ ಕಾಲಾವಧಿ ಅತಿ ಚಿಕ್ಕದು ಎಂದು ಪೀಠ ಸ್ಪಷ್ಟಪಡಿಸಿತು.

(ಕೃಪೆ: ಬಾರ್ & ಬೆಂಚ್)

Join Whatsapp