ಪಶ್ಚಿಮ ಬಂಗಾಳ: ತಮ್ಲುಕ್ ಕ್ಷೇತ್ರದಲ್ಲಿ ಟಿಎಂಸಿ ನಾಯಕನ ಹತ್ಯೆ

Prasthutha|

ಕೋಲ್ಕತ್ತ: ಪಶ್ಚಿಮ ಬಂಗಾಳದ ಪುರ್ಬಾ ಮೇದಿನಿಪುರ ಜಿಲ್ಲೆಯ ಮಹಿಷಾದಲ್ ನಲ್ಲಿ ಶುಕ್ರವಾರ ತಡರಾತ್ರಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ತಮ್ಲುಕ್ ಕ್ಷೇತ್ರದ ಮಹಿಷಾದಲ್ ನಲ್ಲಿ ಮೊಯಿಬುಲ್ ಶೇಖ್ (42) ಅವರನ್ನು ಹತ್ಯೆ ಮಾಡಲಾಗಿದ್ದು, ಟಿಎಂಸಿ –ಬಿಜೆಪಿ ಮಧ್ಯೆ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ತಮ್ಲುಕ್ ಸೇರಿದಂತೆ ಇತರೆ ಏಳು ಲೋಕಸಭಾ ಕ್ಷೇತ್ರಗಳಲ್ಲಿ ಇಂದು (ಶನಿವಾರ) ಮತದಾನ ನಡೆಯುತ್ತಿದೆ. ಇದರ ನಡುವೆ ಮೊಯಿಬುಲ್ ಶೇಖ್ ಅವರನ್ನು ಹತ್ಯೆ ಮಾಡಲಾಗಿದೆ. ಮೊಯಿಬುಲ್ ಶೇಖ್ ಶುಕ್ರವಾರ ಸಂಜೆ ಮನೆಗೆ ವಾಪಸಾಗುತ್ತಿದ್ದಾಗ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಬಿಜೆಪಿಯ ಗೂಂಡಾಗಳ ಗುಂಪೊಂದು ಶೇಖ್ ಮತ್ತು ಇತರ ಇಬ್ಬರು ಕಾರ್ಯಕರ್ತರ ಮೇಲೆ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿದೆ ಎಂದು ಟಿಎಂಸಿ ಶಾಸಕ ತಿಲಕ್ ಚಕ್ರವರ್ತಿ ಆರೋಪಿಸಿದ್ದಾರೆ.

Join Whatsapp