ಹಿಂಸಾಚಾರ ಹಿನ್ನೆಲೆ ಪಶ್ಚಿಮ ಬಂಗಾಳದ 604 ಪಂಚಾಯತ್ ಬೂತ್‌ಗಳಲ್ಲಿ ಮರು ಮತದಾನ

Prasthutha|

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಪಂಚಾಯತ್​ ಚುನಾವಣೆ ವೇಳೆ ಭಾರೀ ಹಿಂಸಾಚಾರ ನಡೆದ ಹಿನ್ನೆಲೆ 604 ಮತಗಟ್ಟೆಗಳಲ್ಲಿ ನಡೆದ ಮತದಾನವನ್ನು ಅಸಿಂಧುಗೊಳಿಸಿ ನಿನ್ನೆ (ಜುಲೈ 9) ರಾಜ್ಯ ಚುನಾವಣಾ ಆಯೋಗವು ಆದೇಶಿಸಿದೆ.

- Advertisement -

ಅಲ್ಲದೆ, ಇಂದು (ಜುಲೈ 10) ಈ ಬೂತ್​ಗಳಿಗೆ ಮರುಮತದಾನ ನಡೆಯಲಿದೆ ಎಂದು ಘೋಷಿಸಿದ್ದು, ಬೆಳಗ್ಗೆ 7 ರಿಂದ ಸಂಜೆ 5ರ ವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ.

ಮುರ್ಷಿದಾಬಾದ್‌ನಲ್ಲಿ 175 ಬೂತ್‌ಗಳಲ್ಲಿ ಮರು ಮತದಾನ ನಡೆಯಲಿದ್ದು, ಮಾಲ್ಡಾದಲ್ಲಿ 112, ನಾಡಿಯಾದಲ್ಲಿ 89, ಉತ್ತರ 24 ಪರಗಣಗಳಲ್ಲಿ 46, ದಕ್ಷಿಣ 24 ಪರಗಣಗಳಲ್ಲಿ 36, ಪುರ್ಬಾ ಮೇದಿನಿಪುರದಲ್ಲಿ 31, ಹೂಗ್ಲಿಯಲ್ಲಿ 29, ದಕ್ಷಿಣ ದಿನಾಜ್‌ಪುರದಲ್ಲಿ 18, ಜಲ್ಪೈಗುರಿಯಲ್ಲಿ 14, ಬಿರ್ಭೂಮ್ನಲ್ಲಿ 14, ಪಶ್ಚಿಮ ಮೇದಿನಿಪುರದಲ್ಲಿ 10, ಬಂಕುರಾದಲ್ಲಿ 8, ಹೌರಾದಲ್ಲಿ 8, ಪಶ್ಚಿಮ ಬರ್ಧಮಾನ್​ನಲ್ಲಿ 6, ಪುರುಲಿಯಾದಲ್ಲಿ 4, ಅಲಿಪುರ್‌ದುವಾರ್‌ನಲ್ಲಿ 1 ಹಾಗೂ ಪುರ್ಬಾ ಬರ್ಧಮಾನ್‌ನಲ್ಲಿ 3 ಬೂತ್​ಗಳಿಗೆ ಮರು ಮತದಾನ ನಡೆಯಲಿದೆ​.

- Advertisement -

ದಕ್ಷಿಣ 24 ಪ್ಯಾರಗನ್‌ಗಳಲ್ಲಿ, ಡೈಮಂಡ್ ಹಾರ್ಬರ್‌ನಲ್ಲಿ 10 ಸೇರಿದಂತೆ 36 ಬೂತ್‌ಗಳಲ್ಲಿ ಮರು ಮತದಾನ ನಡೆಯಲಿದ್ದು, ಗೋಸಾಬ ಮತ್ತು ಜೋಯನಗರದಲ್ಲಿ ತಲಾ 5, ಬಸಂತಿಯಲ್ಲಿ 4, ಕುಲ್ತಾಲಿ, ಜೋಯ್‌ನಗರ II ರಲ್ಲಿ ತಲಾ 3, ಮಂದಿರ ಬಜಾರಿನಲ್ಲಿ 2, ಬಿಷ್ಣುಪುರ್, ಬರುಯಿಪುರ್, ಮಥುರಾಪುರ ಮತ್ತು ಮಗ್ರಾಹತ್‌ನಲ್ಲಿ ತಲಾ ಒಂದೊಂದು ಬೂತ್​ಗಳಲ್ಲಿ ಮರು ಮತದಾನ ನಡೆಯಲಿದೆ.

ಪಶ್ಚಿಮ ಬಂಗಾಳದಲ್ಲಿ ಶನಿವಾರ ಪಂಚಾಯತ್ ಚುನಾವಣೆಗೆ ಮತದಾನ ನಡೆದಿತ್ತು. ಈ ವೇಳೆ ಹಲವೆಡೆ ವಿವಿಧ ಪಕ್ಷಗಳ ಕಾರ್ಯಕರ್ತರ ನಡುವೆ ಹಿಂಸಾಚಾರಗಳು ನಡೆದಿದ್ದವು. ಘಟನೆಯಲ್ಲಿ 20 ಮಂದಿ ಸಾವನ್ನಪ್ಪಿದ್ದರು. ಮತಪೆಟ್ಟಿಗೆಗಳನ್ನು ಧ್ವಂಸಗೊಳಿಸಿದ ಹಲವಾರು ಘಟನೆಗಳು ಕೂಡ ನಡೆದಿರುವುದಾಗಿ ವರದಿಯಾಗಿತ್ತು. ಅದರಂತೆ ರಾಜ್ಯ ಚುನಾವಣಾ ಆಯೋಗವು ಹಿಂಸಾಚಾರದಲ್ಲಿ ಆದ ಸಾವುಗಳು ಮತ್ತು ಹಿಂಸಾಚಾರದ ಬಗ್ಗೆ ವಿವರವಾದ ವರದಿಯನ್ನು ಜಿಲ್ಲಾಧಿಕಾರಿಗಳಿಂದ ಕೇಳಿದೆ.

ರಾಜ್ಯದ ಮೂರು ಹಂತದ ಪಂಚಾಯತ್ ವ್ಯವಸ್ಥೆಯಲ್ಲಿ ಒಟ್ಟು 73,887 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 2.06 ಲಕ್ಷ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ 5.67 ಕೋಟಿ ಜನರು ಮತ ಚಲಾಯಿಸಲು ಅರ್ಹರಾಗಿದ್ದರೆ, ತಾತ್ಕಾಲಿಕವಾಗಿ ಶೇಕಡಾ 66.28 ರಷ್ಟು ಮತದಾನ ದಾಖಲಾಗಿದೆ.