ಪಶ್ಚಿಮ ಬಂಗಾಳ: ದೇಶದಲ್ಲಿ ಇಂದು ಲೋಕಸಭೆ ಚುನಾವಣೆಯ ಮೊದಲನೇ ಹಂತದ ಮತದಾನ ನಡೆಯುತ್ತಿದೆ. ಇದರ ನಡುವೆ ಪಶ್ಚಿಮ ಬಂಗಾಳದಲ್ಲಿ ಅಹಿತರ ಘಟನೆಯೊಂದು ನಡೆದಿದೆ.
ಕೂಚ್ ಬೆಹಾರ್ ನ ಚಂದ್ಮರಿ ಗ್ರಾಮದಲ್ಲಿ ಕಲ್ಲು ತೂರಾಟ ನಡೆಸಲಾಗಿದೆ. ಮತದಾನ ಮಾಡಲು ಅಡ್ಡಿ ಪಡಿಸಲಾಗುತ್ತಿದೆ ಎಂದು ಹೇಳಲಾಗಿದೆ.
ಕೂಚ್ ಬೆಹಾರ್ ಕ್ಷೇತ್ರದ ಈ ಕಲ್ಲು ತೂರಾಟ ನಡೆಸಲಾಗಿದೆ ಎಂದು ವರದಿಯಾಗಿದೆ. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿತ್ತು. ಇನ್ನು ಕೂಚ್ ಬೆಹಾರ್, ಅಲಿಪುರ್ದವಾರ್ಸ್ ಮತ್ತು ಜಲ್ಪೈಗುರಿ ಕ್ಷೇತ್ರದಲ್ಲಿ ಕೇಂದ್ರ ಪಡೆಗಳ ಜೊತೆಗೆ ಒಟ್ಟು 2,454 ರಾಜ್ಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅದರೂ ಇಂತಹ ಘಟನೆ ನಡೆದಿದೆ.