ಗಾಂಧೀಜಿ ಹಂತಕರೊಂದಿಗೆ ವೇದಿಕೆ ಹಂಚಲ್ಲ । ಬಿಜೆಪಿ ಮುಖಂಡರಿದ್ದ ಸಭೆಯನ್ನು ಬಹಿಷ್ಕರಿಸಿದ ಟಿ.ಎಂ.ಸಿ ಸಚಿವ

Prasthutha|

ಕೋಲ್ಕತ್ತಾ: ಮಹಾತ್ಮ ಗಾಂಧಿ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದರೊಬ್ಬರು ಭಾಗವಹಿಸಿದ ಕಾರಣದಿಂದ ಆಕ್ರೋಶಗೊಂಡ ಟಿ.ಎಂ.ಸಿ ಸಚಿವರೊಬ್ಬರು “ಗಾಂಧಿ ಹಂತಕ” ರೊಂದಿಗೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ತಿಳಿಸುತ್ತಾ ಸಭೆಯನ್ನು ಬಹಿಷ್ಕರಿಸಿ ಹೊರನಡೆದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

- Advertisement -

ಗಾಂಧೀಜಿ ಅವರ ಪುಣ್ಯತಿಥಿ ಅಂಗವಾಗಿ ಭಾನುವಾರ ಬಾರಕ್ ಪೋರ್ ಎಂಬಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳ ಸರ್ಕಾರದ ಅರಣ್ಯ ಸಚಿವರಾದ ಜ್ಯೋತಿಪ್ರಿಯಾ ಮಲಿಕ್ ಅವರು ಬಿಜೆಪಿ ಸಂಸದ ಅರ್ಜುನ್ ಸಿಂಗ್ ಎಂಬವರೊಂದಿಗೆ ವೇದಿಕೆ ಹಂಚಲು ನಿರಾಕರಿಸಿ ಸಭೆ ಬಹಿಷ್ಕರಿಸಿ ನಿರ್ಗಮಿಸಿದ್ದಾರೆ.

ಬಂಗಾಳ ರಾಜ್ಯಪಾಲ್ ಜಗದೀಪ್ ಧನ್ ಖರ್ ಅವರ ಪಕ್ಕದಲ್ಲಿದ್ದ ಸಚಿವ ಜ್ಯೋತಿಪ್ರಿಯಾ ಅವರು ಬಿಜೆಪಿ ಸಂಸದ ವೇದಿಕೆಯ ಕಡೆಗೆ ಬರುತ್ತಿದ್ದಂತೆ ಸಭೆಯಿಂದ ಕೆಳಗಿಳಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅವರು ಗಾಂಧಿ ಹಂತಕ ಪಡೆಯೊಂದಿಗೆ ವೇದಿಕೆ ಹಂಚಿಕೊಳ್ಳಲಾರೆ. ಗಾಂಧಿ ಹತ್ಯೆಯನ್ನು ಪ್ರತಿರೋಧಿಸಿ ಈ ನಡೆಯನ್ನು ಪ್ರದರ್ಶಿಸಿರುವುದಾಗಿ ಅವರು ತಿಳಿಸಿದರು.

- Advertisement -

ಈ ಮಧ್ಯೆ ಶನಿವಾರ ತಡರಾತ್ರಿ ದುಷ್ಕರ್ಮಿಗಳ ತಂಡವೊಂದು ಟಿ.ಎಂ.ಸಿ ಮುಖಂಡ ಗೋಪಾಲ್ ಮಜುಂದಾರ್ ಎಂಬವರನ್ನು ಹತ್ಯೆ ನಡೆಸಿದೆ. ಈ ಹತ್ಯೆಯಲ್ಲಿ ಬಿಜೆಪಿ ಸಂಸದ ಅರ್ಜುನ್ ಸಿಂಗ್ ಪಾತ್ರವಿದೆ ಎಂದು ಆಡಳಿತರೂಢ ಟಿ.ಎಂ.ಸಿ ಆರೋಪಿಸಿದೆ.



Join Whatsapp