ಪಶ್ಚಿಮ ಬಂಗಾಳ: ಇ.ಡಿ ಅಧಿಕಾರಿಗಳ ಕಾರಿನ ಮೇಲೆ ದಾಳಿ

Prasthutha|

ಕೋಲ್ಕತ್ತ: ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳಿದ್ದ ಕಾರಿನ ಮೇಲೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸಂದೇಶ್ ಖಲಿ ಎಂಬಲ್ಲಿ ಶುಕ್ರವಾರ ದಾಳಿ ನಡೆಸಲಾಗಿದೆ.

- Advertisement -

ನಾಲ್ಕೂ ಬದಿಯಲ್ಲಿ ಕಾರಿನ ಗಾಜುಗಳು ಪುಡಿಯಾಗಿದ್ದು, ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಬಿಜೆಪಿ ಘಟಕ ಅಧ್ಯಕ್ಷ ಸುಕಾಂತ ಮಜುಂದರ್, ‘ದೂರು ಅಥವಾ ಭ್ರಷ್ಟಾಚಾರದ ಆರೋಪ ಇರುವವರ ಮೇಲೆ ಇ.ಡಿ ದಾಳಿ ನಡೆಸುವುದು ಸ್ವಾಭಾವಿಕ. ಆದರೆ ಸಂದೇಶ್ ಖಲಿಯಲ್ಲಿ ಇ.ಡಿ ಅಧಿಕಾರಿಗಳ ಮೇಲೆ ನಡೆದ ದಾಳಿಯು, ರಾಜ್ಯದ ಕಾನೂನು ಸುವ್ಯವಸ್ಥೆಗೆ ರೋಹಿಂಗ್ಯಾಗಳು ಏನು ಮಾಡುತ್ತಿದ್ದಾರೆ ಎನ್ನುವುದನ್ನು ತೋರಿಸಿದೆ’ ಎಂದು ಹೇಳಿದ್ದಾರೆ.

- Advertisement -

Join Whatsapp