ಪಶ್ಚಿಮ ಬಂಗಾಳ: ಬೇರೆ ಬೇರೆ ಪಕ್ಷಗಳಿಂದ ಚುನಾವಣಾ ಕಣಕ್ಕಿಳಿದ ವಿಚ್ಛೇದಿತ ದಂಪತಿ

Prasthutha|

2024ರ ಲೋಕಸಭೆ ಚುನಾವಣೆಗೆ ರಾಜ್ಯದ 42 ಸ್ಥಾನಗಳಿಗೆ ಟಿಎಂಸಿ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.

- Advertisement -

ಬಂಗಾಳದ ಬಿಷ್ಣುಪುರ ಕ್ಷೇತ್ರವು ಇಡೀ ದೇಶದಲ್ಲಿ ಚರ್ಚೆಯ ವಿಷಯವಾಗಿದೆ. ಏಕೆಂದರೆ ವಿಚ್ಛೇದಿತ ದಂಪತಿ ಬೇರೆ ಬೇರೆ ಪಕ್ಷಗಳಿಂದ ಕಣಕ್ಕಿಳಿದಿದ್ದಾರೆ. ಬಂಕುರಾ ಜಿಲ್ಲೆಯ ಬಿಷ್ಣುಪುರ ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ ಸೌಮಿತ್ರಾ ಖಾನ್‌ಗೆ ಬಿಜೆಪಿ ಟಿಕೆಟ್ ನೀಡಿದೆ.

ಅದೇ ಸ್ಥಾನದಿಂದ ಟಿಎಂಸಿ ಅವರ ಮಾಜಿ ಪತ್ನಿ ಸುಜಾತಾ ಮಂಡಲ್ ಅವರಿಗೆ ಟಿಕೆಟ್ ನೀಡಿದೆ.

- Advertisement -

ಸೌಮಿತ್ರಾ ಖಾನ್ ಮತ್ತು ಸುಜಾತಾ ಮಂಡಲ್ ಅವರು ಪಶ್ಚಿಮ ಬಂಗಾಳದಲ್ಲಿ 2021 ರ ವಿಧಾನಸಭಾ ಚುನಾವಣೆಯ ಮೊದಲು ಬೇರ್ಪಟ್ಟರು. ಆ ಸಮಯದಲ್ಲಿ, ಸುಜಾತಾ ಮಂಡಲ್ ತೃಣಮೂಲ ಕಾಂಗ್ರೆಸ್‌ಗೆ ಸೇರಿದ ನಂತರ, ಸೌಮಿತ್ರಾ ಖಾನ್ ಅವರು ತಮ್ಮ ಪತ್ನಿಗೆ ವಿಚ್ಛೇದನ ನೀಡುವುದಾಗಿ ಘೋಷಿಸಿದ್ದರು.

2019ರ ಲೋಕಸಭೆ ಚುನಾವಣೆಗೂ ಮುನ್ನ ಸೌಮಿತ್ರಾ ಖಾನ್ ಟಿಎಂಸಿಯಿಂದ ಬಿಜೆಪಿ ಸೇರಿದ್ದರು



Join Whatsapp