ಪಶ್ಚಿಮ ಬಂಗಾಳ: ಪಿಕಪ್ ವ್ಯಾನ್ ಗೆ ವಿದ್ಯುತ್ ತಗುಲಿ 10 ಮಂದಿ ಸಾವು

Prasthutha|

ಕೊಲ್ಕತ್ತ: ಪ್ರಯಾಣಿಕರನ್ನು ಸಾಗಿಸುತ್ತಿದ್ದ  ಪಿಕಪ್ ವ್ಯಾನ್ ಗೆ  ವಿದ್ಯುತ್ ತಗುಲಿ 10 ಮಂದಿ ಸಾವನ್ನಪ್ಪಿರುವ ಘಟನೆ ಭಾನುವಾರ ತಡರಾತ್ರಿ 12 ಗಂಟೆ ಸುಮಾರಿಗೆ ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ನಲ್ಲಿ ನಡೆದಿದೆ.

- Advertisement -

ವಾಹನದಲ್ಲಿ ಚಾಲಕ ಸೇರಿ 27 ಮಂದಿಯಿದ್ದರು ಎನ್ನಲಾಗಿದೆ. ಇವರಲ್ಲಿ 10 ಮಂದಿ ಸಾವನ್ನಪ್ಪಿದ್ದು, ಉಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

” ಮೆಖ್ಲಿಗಂಜ್ ಪಿಎಸ್ ವ್ಯಾಪ್ತಿಯ ಧರ್ಲಾ ಸೇತುವೆಯ ಬಳಿ ಕೂಚ್ ಬೆಹಾರ್ ನಿಂದ ಜಲ್ಪೇಶ್ ಗೆ  ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಸಂದರ್ಭ ಘಟನೆ ನಡೆದಿದೆ. ವಾಹನದ ಹಿಂಬದಿಯಲ್ಲಿ ಅಳವಡಿಸಲಾಗಿದ್ದ ಜನರೇಟರ್ (ಡಿಜೆ ಸಿಸ್ಟಂ) ನ ವೈರಿಂಗ್ ನಿಂದ ಇದು ಸಂಭವಿಸಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ” ಎಂದು ಮಾತಭಂಗಾದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅಮಿತ್ ವರ್ಮಾ ಹೇಳಿದ್ದಾರೆ.

- Advertisement -

ಎಲ್ಲ ಪ್ರಯಾಣಿಕರು ಸಿತಾಲ್ಕುಚಿ ಪ್ರದೇಶಕ್ಕೆ ಸೇರಿದವರಾಗಿದ್ದು, ದುರಂತದ ಬಗ್ಗೆ ಸಂತ್ರಸ್ತರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ಘಟನೆ ನಡೆದ ನಂತರ ವಾಹನದ ಚಾಲಕ ಪರಾರಿಯಾಗಿದ್ದಾನೆ. ವಾಹನವನ್ನು ವಶಪಡಿಸಿಕೊಳ್ಳಲಾಗಿದ್ದು,  ಘಟನೆ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಹೇಳಿದರು.



Join Whatsapp