ಹಿಜಾಬ್ ಕಾರಣದಿಂದಾಗಿ 1000 ಮುಸ್ಲಿಮ್ ಯುವತಿಯರ ಉದ್ಯೋಗ ಅರ್ಜಿ ತಿರಸ್ಕೃತ

Prasthutha|

ಕೋಲ್ಕತ್ತಾ: ಪಶ್ಚಿಮ ಬಂಗಾಳ ಪೊಲೀಸ್ ನೇಮಕಾತಿ ಮಂಡಳಿ (WBPRB) ಗೆ ಮಹಿಳಾ ಕಾನ್ ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಗೆ ಸಲ್ಲಿಸಲಾಗಿದ್ದ 1000 ಮುಸ್ಲಿಮ್ ಯುವತಿಯರ ಅರ್ಜಿಗಳನ್ನು ಹಿಜಾಬ್ ಕಾರಣದಿಂದಾಗಿ ತಿರಸ್ಕರಿಸಲಾಗಿದೆ. ಹಿಜಾಬ್ ನೊಂದಿಗೆ ಅಪ್ಲೋಡ್ ಮಾಡಿದ ಪೋಟೋ ಹೊಂದಿದ ಎಲ್ಲಾ ಅರ್ಜಿಗಳನ್ನು ತಿರಸ್ಕರಿಸಿರುವುದು ಕಂಡುಬಂದಿದೆ.

- Advertisement -

ಪಶ್ಚಿಮ ಬಂಗಾಳ ಪೊಲೀಸ್ ನೇಮಕಾತಿ ಮಂಡಳಿ (WBPRB) ಗೆ ಕಾನ್ ಸ್ಟೇಬಲ್ ಮತ್ತು ಮಹಿಳಾ ಕಾನ್ ಸ್ಟೇಬಲ್ ನೇಮಕಾತಿ ಪರೀಕ್ಷೆಗೆ ಹಾಜರಾಗಲು ಸಲ್ಲಿಸಿದ ಒಟ್ಟು 30,000 ಸಾವಿರ ಅರ್ಜಿ ನಮೂನೆಗಳನ್ನು ತಿರಸ್ಕರಿಸಿದೆ. ಅರ್ಜಿಗಳಲ್ಲಿ ನಮೂದಿಸಿದ ಸಣ್ಣ ಪುಟ್ಟ ಪ್ರಮಾದ ಸೇರಿದಂತೆ ವಿವಿಧ ಕಾರಣಕ್ಕಾಗಿ ಈ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.

WBPRB ನ ಮಾರ್ಗಸೂಚಿಯಲ್ಲಿ ಅರ್ಜಿದಾರರು ತಮ್ಮ ಮುಖಗಳನ್ನು ಯಾವುದೇ ರೀತಿಯಲ್ಲಿ ಮುಚ್ಚಿದ ಪೋಟೋಗಳನ್ನು ಲಗತ್ತಿಸಬಾರದು ಎಂದು ನಮೂದಿಸಿದೆ. WBPRB ಸಪ್ಟೆಂಬರ್ 26 ರಂದು ಪ್ರಾಥಮಿಕ ಪರೀಕ್ಷೆಯನ್ನು ಆಯೋಜಿಸಿದೆ.

- Advertisement -

ಘಟನೆಗೆ ಸಂಬಂಧಿಸಿದಂತೆ ವಿದ್ಯಾರ್ಥಿ ಸಂಘಟನೆಗಳಾದ ಸಿ.ಎಫ್.ಐ, ಎಸ್.ಐ.ಒ, ಸಾಮಾಜಿಕ ಸಂಘಟನೆ ಪಾಪ್ಯುಲರ್ ಫ್ರಂಟ್, ಫ್ರೆಟರ್ನಿಟಿ ಮೂವ್ ಮೆಂಟ್, ಅಖಿಲ ಬಂಗಾಳ ಯೂತ್ ಅಲ್ಪಸಂಖ್ಯಾತ ಒಕ್ಕೂಟ, ಎಸ್.ಡಿ.ಪಿ.ಐ, ವೆಲ್ಪೇರ್ ಪಾರ್ಟಿ ಸೇರಿದಂತೆ ಹಲವಾರು ಸಂಘಸಂಸ್ಥೆಗಳು WBPRB ಅಧ್ಯಕ್ಷರಿಗೆ ಪತ್ರ ಬರೆದಿದ್ದು, ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಮರು ಅಪ್ಲೋಡ್ ಮಾಡಲು ಅಥವಾ ಎಡಿಟ್ ಮಾಡಲು ಸೂಕ್ತ ಕಾಲಾವಕಾಶ ನೀಡಬೇಕು. ಮಾತ್ರವಲ್ಲ ಮುಸ್ಲಿಮರ ಧಾರ್ಮಿಕ ಆಚರಣೆಯನ್ನು ಉಲ್ಲಂಘಿಸದಂತೆ ನಿಯಮಾವಳಿಯನ್ನು ರೂಪಿಸಬೇಕೆಂದು ಒತ್ತಾಯಿಸಿವೆ.



Join Whatsapp