ಭಾಗವತ್ ಗೆ ಸಿಹಿ ನೀಡಿ ಸ್ವಾಗತಿಸಿ ಆದರೆ ಗಲಭೆಯಾಗದಂತೆ ನೋಡಿಕೊಳ್ಳಿ: ಮಮತಾ ಬ್ಯಾನರ್ಜಿ

Prasthutha|

ಕೋಲ್ಕತ್ತ:  ರಾಜ್ಯಕ್ಕೆ ಭೇಟಿ ನೀಡಲಿರುವ  ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಗೆ ಸಿಹಿ ನೀಡಿ ಸ್ವಾಗತಿಸಿ. ಆದರೆ, ಯಾವುದೇ ಗಲಭೆಯಾಗದಂತೆ ಎಚ್ಚರವಹಿಸಿ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪೊಲೀಸರಿಗೆ ಸೂಚಿಸಿದ್ದಾರೆ.

- Advertisement -

ಸರ್ಕಾರದ ಪರವಾಗಿ ಅಧಿಕಾರಿಗಳು ಅವರಿಗೆ ಸಿಹಿ ತಿಂಡಿ ಮತ್ತು ಹೂ ಗುಚ್ಛ, ಹಣ್ಣುಗಳನ್ನು ಕಳುಹಿಸಬಹುದು. ಅತಿಥಿಗಳನ್ನು ನಾವು ಎಷ್ಟು ಸೌಹಾರ್ದಯುತವಾಗಿ ನಡೆಸಿಕೊಳ್ಳುತ್ತೇವೆ ಎಂಬುದನ್ನು ಅವರು ಅರಿತುಕೊಳ್ಳಲಿ ಎಂದು ಮಮತಾ ವ್ಯಂಗ್ಯವಾಡಿದ್ದಾರೆ.

ಬಂಗಾಳದ ಮಿಡ್ನಾಪುರ ಜಿಲ್ಲೆಯ ಕೇಶಿಯಾರಿದಲ್ಲಿ ಮೇ 17ರಿಂದ ಮೇ 20ರವರೆಗೆ ತರಬೇತಿ ಶಿಬಿರ ನಡೆಯಲಿದ್ದು  4 ದಿನಗಳ ಕಾಲ ನಡೆಯಲಿರುವ ಈ ಶಿಬಿರಕ್ಕೆ ಆಗಮಿಸಲಿರುವ ಭಾಗವತ್‌ಗೆ ಸೂಕ್ತ ರಕ್ಷಣೆ ಒದಗಿಸುವ ಸಂಪೂರ್ಣ ಜವಾಬ್ದಾರಿ ಪೊಲೀಸರದ್ದು, ಯಾವುದೇ ಗಲಭೆಯಾಗದಂತೆ ಎಚ್ಚರವಹಿಸಬೇಕಾದ್ದು ಅವರ ಕರ್ತವ್ಯ ಎಂದಿದ್ದಾರೆ.

Join Whatsapp