ಇಂದು ರಾತ್ರಿಯಿಂದ ದ.ಕ ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ

Prasthutha|

ಮಂಗಳೂರು: ಕೋವಿಡ್ ಪ್ರಕರಣಗಳನ್ನು ನಿಯಂತ್ರಿಸುವ ಸಲುವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ ಈ ತಿಂಗಳಾಂತ್ಯದವರೆಗೆ ಘೋಷಿಸಲಾಗಿದ್ದು , ಆಗಸ್ಟ್  27 ರ ರಾತ್ರಿಯಿಂದ  ಆಗಸ್ಟ್ 30 ಬೆಳಗ್ಗಿನವರೆಗೆ ವೀಕೆಂಡ್  ಕರ್ಫ್ಯೂ ಇರಲಿದೆ.

ಶುಕ್ರವಾರ ಸಂಜೆ 9 ರಿಂದ ಸೋಮವಾರ ಬೆಳಗ್ಗೆ 5 ವರೆಗೆ ವೀಕೆಂಡ್  ಕರ್ಫ್ಯೂ ವಿಧಿಸಲಾಗಿದ್ದು, ಬೆಳಗ್ಗೆ 5 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಯಾವುದೇ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶವಿಲ್ಲ, ತುರ್ತು ಸೇವೆಗೆ ಅನುಮತಿ ನೀಡಲಾಗಿದೆ.

- Advertisement -

ಮದ್ಯದಂಗಡಿ ಗಳು ಮತ್ತು ಮಳಿಗೆಗಳು ಪಾರ್ಸೆಲ್ ಕೊಂಡೊಯ್ಯಲು ಮಾತ್ರವೇ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

- Advertisement -