ನವದೆಹಲಿ: ಕೋವಿಡ್ ಕಾರಣದಿಂದಾಗಿ ವಿಮಾನ ಪ್ರಯಾಣ ಸಂಧರ್ಭದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದನ್ನು ಇದೀಗ ವಿಮಾನ ಪ್ರಯಾಣದ ಸಮಯದಲ್ಲಿ ಮಾಸ್ಕ್ ಬಳಕೆ ಕಡ್ಡಾಯವಲ್ಲ ನಾಗರಿಕ ವಿಮಾನಯಾನ ಸಚಿವಾಲಯವು ಬುಧವಾರ ಎಂದು ಹೇಳಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದೊಂದಿಗೆ ಸಮಾಲೋಚಿಸಿ ಹೊಸ ನಿಯಮಗಳನ್ನು ಪರಿಶೀಲಿಸಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ. ಈ ಹಿಂದೆ ಫೇಸ್ ಕವರ್ ಗಳು ಕಡ್ಡಾಯವಾಗಿತ್ತು. ಪ್ರಯಾಣಕ್ಕೆ ನಿಗದಿಯಾಗಿರುವ ವಿಮಾನಗಳ ಸಂಸ್ಥೆಗಳಿಗೆ ಕಳಿಸಲಾಗಿರುವ ಪ್ರಕಟಣೆಯಲ್ಲಿ, ಮಾಸ್ಕ್ ಕಡ್ಡಾಯಗೊಳಿಸುವುದನ್ನು ಹಿಂಪಡೆಯುತ್ತಿರುವ ನಿರ್ಧಾರವನ್ನು COVID-19 ನಿರ್ವಹಣೆಯ ಪ್ರತಿಕ್ರಿಯೆಗೆ ಸರ್ಕಾರದ ಶ್ರೇಣೀಕೃತ ವಿಧಾನದ ನೀತಿಯ ಭಾಗವಾಗಿ ಕೈಗೊಳ್ಳಲಾಗಿದೆ. ಆದ್ದರಿಂದ ವಿಮಾನದ ಒಳಗಿನ ಪ್ರಕಟಣೆಯಲ್ಲಿ, ಪ್ರಯಾಣಿಕರು ತಮ್ಮ ಆಯ್ಕೆಯಿಂದ ಮಾಸ್ಕ್ ಧರಿಸುವುದು ಸೂಕ್ತ ಎಂಬುದಾಗಿ ಹೇಳಬೇಕೆಂದು ಸಚಿವಾಲಯ ತಿಳಿಸಿದೆ
“10.5.2022 ರಂದು ಹೊರಡಿಸಿದ ಆದೇಶದ ಮೂಲಕ ಪ್ರಯಾಣಿಕರು, ವಿಮಾನ ನಿಲ್ದಾಣ ನಿರ್ವಾಹಕರು ಮತ್ತು ವಿಮಾನಯಾನ ಸಂಸ್ಥೆಗಳಿಗೆ ನೀಡಲಾದ ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನ ಪ್ರಯಾಣಕ್ಕಾಗಿ ಏಕೀಕೃತ ಕೋವಿಡ್ -19 ಸೂಚನೆಗಳನ್ನು ಆ ಮಟ್ಟಿಗೆ ಮಾರ್ಪಡಿಸಲಾಗಿದೆ” ಎಂದು ಹೇಳಿಕೆಯಲ್ಲಿ ತಿಳಿಸಿದೆ.