ಫ್ರಾನ್ಸ್‌ನಲ್ಲಿ ನಾಳೆಯಿಂದ ಮಾಸ್ಕ್‌ ಧರಿಸುವುದು ಕಡ್ಡಾಯವಲ್ಲ : ಪ್ರಧಾನಿ ಜೀನ್ ಕ್ಯಾಸ್ಟೆಕ್ಸ್ ಘೋಷಣೆ

Prasthutha|

ಪ್ಯಾರಿಸ್ :‌ ಫ್ರಾನ್ಸ್ ನಲ್ಲಿ ಮಾಸ್ಕ್‌ ಧರಿಸುವುದು ಕಡ್ಡಾಯವಲ್ಲ ಎಂದು ಫ್ರಾನ್ಸ್‌ ಪ್ರಧಾನಿ ಜೀನ್ ಕ್ಯಾಸ್ಟೆಕ್ಸ್ ಘೋಷಿಸಿದ್ದಾರೆ.

- Advertisement -

ಈ ಕುರಿತು ಪ್ರಕಟಣೆ ಹೊರಡಿಸಿರುವ ಫ್ರಾನ್ಸ್‌ ಪ್ರಧಾನಿ, ಜೂನ್ 20 ರಿಂದ ನೈಟ್‌  ಕೋವಿಡ್ ಕರ್ಫ್ಯೂವನ್ನು ಕೊನೆಗೊಳಿಸಲಾಗುವುದು. ರಾಷ್ಟ್ರದ ಹೊರಾಂಗಣದಲ್ಲಿ ಮಾಸ್ಕ್‌ ಧರಿಸುವುದು ಕಡ್ಡಾಯವಲ್ಲ ಎಂದು ಹೇಳಿದ್ದಾರೆ.

ಫ್ರಾನ್ಸ್ ನಲ್ಲಿ ಈಗ ದೈನಂದಿನ ಸರಾಸರಿ 3,900 ಹೊಸ ಸೋಂಕು ದಾಖಲಾಗುವುದರಿಂದ ಫ್ರೆಂಚ್ ಪ್ರಧಾನಿ ಜೀನ್ ಕ್ಯಾಸ್ಟೆಕ್ಸ್ ಈ ಪ್ರಕಟಣೆಯನ್ನ ಹೊರಡಿಸಿದ್ದಾರೆ. 

- Advertisement -

ಫ್ರಾನ್ಸ್ ನ ವಯಸ್ಕ ಜನಸಂಖ್ಯೆಯ 58%ಕ್ಕೂ ಹೆಚ್ಚು ಜನರು ಕೋವಿಡ್-19 ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ. ಇದೀಗ 12 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ.

Join Whatsapp