ಮಂಗಳೂರು: ಮಳಲಿ ಮಸೀದಿ ಕಮಿಟಿಯ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿರುವುದು ಹಿಂದೂಗಳಿಗೆ ಸಂದ ಜಯ ಎಂದು ವಿಎಚ್ ಪಿ ನಾಯಕ ಶರಣ್ ಪಂಪ್ ವೆಲ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಲಿ ದೇವಸ್ಥಾನದ ಮಾದರಿ ಇದ್ದ ಕಾರಣಕ್ಕೆ ನವೀಕರಣಕ್ಕೆ ತಡೆ ತಂದಿದ್ದೆವು. 800 ವರ್ಷಗಳ ಹಿಂದಿನ ದೇವಸ್ಥಾನ, ಪುರಾತತ್ವ ಇಲಾಖೆಯಿಂದ ಸರ್ವೆ ನಡೆಸಲು ಕೋರಿದ್ದೆವು. ಮಂಗಳೂರಿನ ಕೋರ್ಟ್ ಇಂದು ತೀರ್ಪು ನೀಡಿದ್ದು ಮಸೀದಿ ಅರ್ಜಿಯನ್ನು ವಜಾ ಮಾಡಿದೆ. ನಮ್ಮ ಅಹವಾಲನ್ನು ಎತ್ತಿ ಹಿಡಿದಿದೆ, ದೇವಸ್ಥಾನ ಅನ್ನುವ ವಾದಕ್ಕೆ ಪುಷ್ಟಿ ಸಿಕ್ಕಿದೆ ಎಂದರು.
ಮಳಲಿ ಮಸೀದಿ ಜಾಗದಲ್ಲಿ ಬೃಹತ್ ದೇವಸ್ಥಾನ ನಿರ್ಮಾಣಕ್ಕೆ ತಯಾರಿ ಮಾಡುತ್ತೇವೆ. ಅಷ್ಟಮಂಗಳ ಪ್ರಶ್ನೆ ಇಟ್ಟು ಮುಂದಿನ ನಿರ್ಧಾರ ಮಾಡುತ್ತೇವೆ. ಮಳಲಿ ಮಸೀದಿ ವಿಚಾರದಲ್ಲಿ ನಮಗೆ ಆರಂಭಿಕ ಗೆಲುವು ಸಿಕ್ಕಿದೆ ಎಂದರು.
ತೀರ್ಪು ಹಿನ್ನೆಲೆಯಲ್ಲಿ ವಿಹಿಂಪ ಕಚೇರಿ ಮುಂಭಾಗ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಮಳಲಿ ಮಂದಿರ ನಮ್ಮದು ಎಂದು ಘೋಷಣೆ ಕೂಗಿದರು.