ನಾವು ಇಂತಹ ತಪ್ಪನ್ನು ಮತ್ತೆ ಮಾಡುವುದಿಲ್ಲ, ಮತ್ತೆ ಕ್ಷಮೆಯಾಚಿಸಿದ ರಾಮ್ ದೇವ್, ಬಾಲಕೃಷ್ಣ

Prasthutha|

ನವದೆಹಲಿ: ನಾವು ಇಂತಹ ತಪ್ಪನ್ನು ಮತ್ತೆ ಮಾಡುವುದಿಲ್ಲ ಎಂದು ಬಾಬಾ ರಾಮ್ ದೇವ್ ಹಾಗೂ ಬಾಲಕೃಷ್ಣ ಮತ್ತೆ ಕ್ಷಮೆಯಾಚಿಸಿದ್ದಾರೆ. ದಾರಿ ತಪ್ಪಿಸುವ ಜಾಹೀರಾತು ನೀಡಿದ್ದಕ್ಕಾಗಿ ಮತ್ತೆ ಇಂತಹ ತಪ್ಪಾಗುವುದಿಲ್ಲ ಎಂದು ರಾಮ್ ದೇವ್ ಕ್ಷಮೆಯಾಚಿಸಿದ್ದಾರೆ.

- Advertisement -


ನಮ್ಮಿಂದ ಆದ ಲೋಪಕ್ಕೆ ನಾವು ಪ್ರಾಣಿಕವಾಗಿ ವಿಷಾದಿಸುತ್ತೇನೆ. ಈ ತಪ್ಪು ಪುನರಾವರ್ತನೆಯಾಗುವುದಿಲ್ಲ, ಕಾನೂನು ಮತ್ತು ನ್ಯಾಯದ ಘನತೆಯನ್ನು ಎತ್ತಿಹಿಡಿಯಲು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ. ಪತಂಜಲಿ ಆಯುರ್ವೇದ ಲಿಮಿಟೆಡ್ ನ ದಾರಿತಪ್ಪಿಸುವ ಜಾಹೀರಾತು ಪ್ರಕರಣದ ವಿಚಾರಣೆ ಮಂಗಳವಾರ ಸುಪ್ರೀಂ ಕೋರ್ಟ್ ನಲ್ಲಿ ಮತ್ತೆ ನಡೆಯಿತು. ಕಂಪನಿಯ ಸಂಸ್ಥಾಪಕರಾದ ಯೋಗ ಗುರು ರಾಮದೇವ್ ಮತ್ತು ಬಾಲಕೃಷ್ಣ ಆಚಾರ್ಯ ಅವರ ಪರವಾಗಿ ಬೇಷರತ್ ಕ್ಷಮೆಯಾಚಿಸುವ ಕ್ಷಮಾಪಣೆ ಪತ್ರವನ್ನು ಮುದ್ರಿಸಲಾಗಿದೆ.


ಈ ಹಿಂದೆ ಪತಂಜಲಿ ಸಂಸ್ಥೆಯ ಉಭಯ ಮುಖ್ಯಸ್ಥರು ಸಲ್ಲಿಸಿದ್ದ ‘ಭೇಷರತ್ ಕ್ಷಮೆ’ಯನ್ನು ನಿರಾಕರಿಸಿದ್ದ ಸುಪ್ರೀಂ ಕೋರ್ಟ್ ಅವರಿಗೆ ಛೀಮಾರಿ ಹಾಕಿತ್ತು. ಆದರೆ ಇದೀಗ ಬಾಬಾ ರಾಮ್ ದೇವ್ ಪತ್ರಿಕೆಗಳಲ್ಲಿ ತಮ್ಮ ಕ್ಷಮಾಪಣೆ ಪತ್ರವನ್ನು ಮುದ್ರಿಸಿರುವುದಾಗಿ ಕೋರ್ಟ್ ಗೆ ಮಾಹಿತಿ ನೀಡಿದ್ದಾರೆ. ಈ ವಾದವನ್ನು ಆಲಿಸಿದ ಕೋರ್ಟ್ ರಾಮ್ ದೇವ್ ಅವರ ಕ್ಷಮೆ ಜಾಹಿರಾತನ್ನು ಕಡತಗಳಿಗೆ ಸೇರಿಸುವಂತೆ ಸೂಚನೆ ನೀಡಿತ್ತು.

Join Whatsapp