ತ್ರಿಶೂಲವನ್ನು ನೀಡುತ್ತೇವೆ, ಪಡೆಯುತ್ತೇವೆ, ಬಳಸುತ್ತೇವೆ: ಕಾನೂನು ಪಾಲಕರ ಸಮ್ಮುಖದಲ್ಲೇ ಪ್ರಚೋದನಕಾರಿ ಘೋಷಣೆ

Prasthutha|

ಮಡಿಕೇರಿ: ವಿ.ಎಚ್.ಪಿ. ಮತ್ತು ಬಜರಂಗದಳ ಕಾರ್ಯಕರ್ತರು ಪೊಲೀಸರ ಸಮ್ಮುಖದಲ್ಲೇ ಪ್ರಚೋದನಕಾರಿ ಘೋಷಣೆ ಕೂಗಿದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ನಡೆದಿದೆ.

- Advertisement -

ಈ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರತ ಮಾತೆಯ ರಕ್ಷಣೆಗಾಗಿ ತ್ರಿಶೂಲವನ್ನು ನೀಡುತ್ತೇವೆ, ಪಡೆಯುತ್ತೇವೆ, ಬಳಸುತ್ತೇವೆ. ತ್ರಿಶೂಲ ಎಂಬುದು ನನ್ನ ಹಕ್ಕು, ನನ್ನ ಹೆಮ್ಮೆ ಎಂದು ಕಾನೂನು ಪಾಲಿಸಬೇಕಾದ ಪೊಲೀಸರು ಸಮ್ಮುಖದಲ್ಲೇ ಸಂಘಪರಿವಾರದ ಕಾರ್ಯಕರ್ತರು ಪ್ರಚೋದನಕಾರಿ ಘೋಷಣೆ ಕೂಗುತ್ತಿರುವುದು ಸೆರೆಯಾಗಿದೆ.

ವಿ.ಎಚ್.ಪಿ. ಮತ್ತು ಬಜರಂಗದಳ ಕಾರ್ಯಕರ್ತರಿಗೆ ಕೊಡಗಿನ ಪೊನ್ನಂಪೇಟೆಯಲ್ಲಿ ತ್ರಿಶೂಲ ದೀಕ್ಷೆ, ಏರ್ ಗನ್ ತರಬೇತಿ ನೀಡಿರುವ ಪ್ರಸಂಗ ವಿವಾದವಾಗುತ್ತಿದ್ದಂತೆ ಗನ್ ತರಬೇತಿಯನ್ನು ನೀಡಿರುವ ಕ್ರಮವನ್ನು ಸಮರ್ಥಿಸಿ ವಿರಾಜಪೇಟೆಯಲ್ಲಿ ಸಂಘಪರಿವಾರ ಪ್ರತಿಭಟನೆ ನಡೆಸಿದೆ. ಪ್ರತಿಭಟನೆಯಲ್ಲಿ ಈ ರೀತಿ ಪ್ರಚೋದನಕಾರಿಯಾಗಿ ಘೋಷಣೆ ಕೂಗಲಾಗಿದೆ.

- Advertisement -

ತಮ್ಮ ಸಮ್ಮುಖದಲ್ಲಿಯೇ ಪ್ರಚೋದನಕಾರಿಯಾಗಿ ಘೋಷಣೆ ಕೂಗಲಾಗಿದ್ದರೂ ಪೊಲೀಸರು ಮೂಕಪ್ರೇಕ್ಷಕರಾಗಿದ್ದರು. ಪೊಲೀಸರ ಈ ನಡೆಗೆ ನೆಟ್ಟಿಗರಿಂದ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.



Join Whatsapp