ನಾವು ಮಠಕ್ಕೆ ಬಂದು ಮೊಟ್ಟೆ ತಿನ್ನುತ್ತೇವೆ: ಮಠಾಧೀಶರಿಗೆ ವಿದ್ಯಾರ್ಥಿನಿ ಎಚ್ಚರಿಕೆ !

Prasthutha|

ಕೊಪ್ಪಳ: ನಾವು ಮಠಕ್ಕೆ ಬಂದು ಮೊಟ್ಟೆ ತಿನ್ನುತ್ತೇವೆ ಎಂದು ಕೊಪ್ಪಳದ ಗಂಗಾವತಿಯ ವಿದ್ಯಾರ್ಥಿನಿ ಮಠಾಧೀಶರಿಗೆ ಎಚ್ಚರಿಕೆ ನೀಡಿದ್ದಾಳೆ. ಈ ಕುರಿತು ಒಂದು ವೀಡಿಯೋ ವೈರಲ್ ಆಗಿದೆ.

- Advertisement -

ಶಾಲೆಯಲ್ಲಿ ಮೊಟ್ಟೆ ನೀಡಲು ಮಠಾಧೀಶರು ವಿರೋಧಿಸಿದ್ದಕ್ಕೆ ವಿದ್ಯಾರ್ಥಿನಿ ಮಠಾಧೀಶರ ವಿರುದ್ಧ ತಿರುಗಿ ಬಿದ್ದಿದ್ದಾಳೆ. ನಾವು ಮಠಕ್ಕೆ ಬಂದು ಮೊಟ್ಟೆ ತಿನ್ನುತ್ತೇವೆ ಎಂದು ಮಠಾಧೀಶರಿಗೆ ಸವಾಲು ಹಾಕಿದ್ದಾಳೆ. ನಾವು ಮೊಟ್ಟೆ ತಿಂದರೆ ಬದುಕುತ್ತೇವೆ. ಇಲ್ಲವಾದರೆ ನಾವು ಸಾಯುತ್ತೇವೆ. ನಾವು ಬದುಕುವುದು ಬೇಕಾ? ನಿಮಗೆ ಮೊಟ್ಟೆ ಕೊಡದಿರುವುದು ಬೇಕಾ? ಎಂದು ಮಠಾಧೀಶರನ್ನು ಪ್ರಶ್ನಿಸಿದ್ದಾಳೆ.

ಮಕ್ಕಳು ದೇವರು ಸಮಾನ ಅಂತಾರೆ ಹಾಗಾದರೆ ದೇವರ ಆಸೆ ಏಕೆ ಈಡೇರಿಸಲ್ಲ. ಮಠಕ್ಕೆ ಬಂದು ದಕ್ಷಿಣೆ ಹಾಕಿಲ್ವಾ? ಒಂದಲ್ಲ ಎರಡೆರಡು ಮೊಟ್ಟೆ ತಿನ್ನುತ್ತೇವೆ. ಮೊಟ್ಟೆಗಾಗಿ ರೋಡಿಗೆ ಬೇಕಾದರೂ ಇಳಿಯುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾಳೆ.



Join Whatsapp