ಅಪ್ಪನ ಹೆಸರಲ್ಲಿ ಮಾಲ್ ಕಟ್ಟುತ್ತೇವೆ: ರೈತ ಫಕೀರಪ್ಪ ಮಕ್ಕಳು

Prasthutha|

ಹಾವೇರಿ: ಸಿನಿಮಾ ನೋಡಲು ಬೆಂಗಳೂರಿನ ಜಿ.ಟಿ. ಮಾಲ್‌ಗೆ ಪಂಚೆ ಧರಿಸಿ ಹೋಗಿದ್ದ ನಮ್ಮ ತಂದೆಯನ್ನು ಸಿಬ್ಬಂದಿ ಒಳಗೆ ಬಿಟ್ಟಿಲ್ಲ. ಈ ಅವಮಾನವನ್ನು ನಾವು ಸಹಿಸುವುದಿಲ್ಲ. ಮುಂದಿನ ದಿನಗಳಲ್ಲಿ ನಾವೂ ಮಾಲ್ ಕಟ್ಟಿಸಿ, ಅದಕ್ಕೆ ಅಪ್ಪನ ಹೆಸರಿಡುತ್ತೇವೆ ಎಂದು ರೈತ ಫಕೀರಪ್ಪ ಅವರ ಮಕ್ಕಳು ಹೇಳಿದ್ದಾರೆ.

- Advertisement -

ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಅರೇಮಲ್ಲಾಪುರ ಗ್ರಾಮದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನನ್ನ ಅಪ್ಪ ರೈತ. ಅವರನ್ನು ಮಾಲ್‌ ಒಳಗೆ ಬಿಡಲಿಲ್ಲವೆಂಬ ವಿಷಯ ತಿಳಿದು ನಮಗೆ ನೋವಾಗಿದೆ ಎಂದರು.

ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಜಿ.ಟಿ ಮಾಲ್​ಗೆ ಕಲ್ಕಿ ಸಿನಿಮಾ ವೀಕ್ಷಣೆಗೆ ಬಂದಿದ್ದ ಫಕೀರಪ್ಪ ಎಂಬ ವೃದ್ಧ ಪಂಚೆ ಧರಿಸಿದ್ದ ಎಂಬ ಕಾರಣಕ್ಕೆ ಮಾಲ್ ಒಳಗೆ ಬಿಡದೆ ಸಿಬ್ಬಂದಿ ಅವಮಾನ ಮಾಡಿದ್ದರು. ಸದ್ಯ ಈಗ ರೈತ ಫಕೀರಪ್ಪಗೆ ಅವಮಾನ ಮಾಡಿದ್ದ ಮಾಲ್​​ನಿಂದಲೇ ಸನ್ಮಾನ ಮಾಡಲಾಗಿದೆ.

- Advertisement -

ಪ್ರತಿಯೊಬ್ಬ ರೈತನಿಗೆ ನಾವು ಸಲಾಂ ಹೇಳಬೇಕು. ಬಟ್ಟೆ ನೋಡಿ ಅಳೆಯಬಾರದು. ಅವಮಾನವಾದ ಮಾಲ್‌ನಲ್ಲಿಯೇ ಅಪ್ಪನಿಗೆ ಮರುದಿನ ಸನ್ಮಾನವಾಗಿದೆ ಎಂದು ಅವರು ಹೇಳಿದ್ದಾರೆ.



Join Whatsapp