ಅಗ್ನಿಪಥ ಯೋಜನೆ ಹಿಂಪಡೆಯದಿದ್ದರೆ ನಾವು ಭಯೋತ್ಪಾದಕರಾಗುತ್ತೇವೆ: ಪ್ರತಿಭಟನಾ ನಿರತ ಯುವಕರ ಆಕ್ರೋಶದ ಮಾತು ವೈರಲ್

Prasthutha|

ಪಾಟ್ನಾ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ ಯೋಜನೆಯ ವಿರುದ್ಧದ ಪ್ರತಿಭಟನೆ ಹಿಂಸಾತ್ಮಕ ರೂಪ ತಳೆದಿದ್ದು, ಸರ್ಕಾರ ಈ ಯೋಜನೆಯನ್ನು ಕೈಬಿಡದಿದ್ದರೆ ಅನಿವಾರ್ಯವಾಗಿ ಭಯೋತ್ಪಾದಕರಾಗಬೇಕಾಗುತ್ತದೆ ಎಂದು ಆಕ್ರೋಶಿತ ಯುವ ಸಮೂಹ ಕಿಡಿಕಾರಿದೆ.

- Advertisement -

ಅಗ್ನಿಪಥ ಯೋಜನೆಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಆಕ್ರೋಶಿತ ಉದ್ಯೋಗಕಾಂಕ್ಷಿಗಳು, ಸರ್ಕಾರ ಈ ಯೋಜನೆಯನ್ನು ತಕ್ಷಣ ಕೈಬಿಡಬೇಕು. ಇಲ್ಲದೇ ಹೋದಲ್ಲಿ ನಾವೆಲ್ಲರೂ ಅನಿವಾರ್ಯವಾಗಿ ಭಯೋತ್ಪಾದಕರಾಗಬೇಕಾಗುತ್ತದೆ ಎಂದು ಗುಡುಗಿದ್ದಾರೆ.

ಈ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸರ್ಕಾರದ ವಿರುದ್ಧ ನೆಟ್ಟಿಗರಿಂದ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿದೆ.

Join Whatsapp