ಇಸ್ರೇಲ್ ದಾಳಿಗೆ ಪ್ರತಿಕ್ರಿಯಿಸುವ ಹಕ್ಕು ನಮಗೆ ಇದೆ, ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಸಿದ್ಧ: ಇರಾನ್‌ ಸರ್ವೋಚ್ಚ ನಾಯಕ ಖಮೇನಿ

Prasthutha|

- Advertisement -

ಮಧ್ಯಪ್ರಾಚ್ಯದಲ್ಲಿ ಶನಿವಾರ ಮುಂಜಾನೆ ಇರಾನ್ ಮೇಲೆ ಇಸ್ರೇಲ್ ಬಾಂಬ್ ದಾಳಿ ನಡೆಸಿತ್ತು. ಇಸ್ರೇಲ್ ದಾಳಿಗೆ ಸಂಬಂಧಿಸಿದಂತೆ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮೌನ ಮುರಿದಿದ್ದಾರೆ.

- Advertisement -

ಇಸ್ರೇಲ್ ದಾಳಿಯನ್ನು ಉತ್ಪ್ರೇಕ್ಷೆ ಮಾಡಬಾರದು ಅಥವಾ ಕಡಿಮೆ ಅಂದಾಜು ಮಾಡಬಾರದು ಎಂದು ಹೇಳಿದ್ದು, ಆದರೆ ಇಸ್ರೇಲ್ ಆಕ್ರಮಣಕ್ಕೆ ಪ್ರತಿಕ್ರಿಯಿಸುವ ಹಕ್ಕು ಇರಾನ್‌ಗೆ ಇದೆ, ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಸಿದ್ಧ ಎಂದು ಹೇಳಿದ್ದಾರೆ.

ಇರಾನ್ ಮತ್ತು ಅದರ ಜನರನ್ನು ಇನ್ನೂ ತಿಳಿದುಕೊಳ್ಳದ ಕಾರಣ ಇಸ್ರೇಲ್ ಆಡಳಿತವು ಇರಾನ್ ಬಗ್ಗೆ ತಪ್ಪು ಕಲ್ಪನೆಯನ್ನು ಹೊಂದಿದೆ ಮತ್ತು ಇರಾನ್‌ನ ಸಾಮರ್ಥ್ಯ ಮತ್ತು ನಿರ್ಣಯದ ಮಟ್ಟವನ್ನು ಅರ್ಥಮಾಡಿಕೊಳ್ಳಬೇಕು ಎಂದು ಇರಾನ್ ಸುಪ್ರೀಂ ನಾಯಕ ಖಮೇನಿ ಹೇಳಿದ್ದು, ಇರಾನ್ ರಾಷ್ಟ್ರ ಮತ್ತು ಅದರ ಯುವಕರ ಶಕ್ತಿ, ಇಚ್ಛೆ ಮತ್ತು ಉಪಕ್ರಮವನ್ನು ಅವರಿಗೆ (ಇಸ್ರೇಲ್) ಮನವರಿಕೆ ಮಾಡುವುದು ಅಗತ್ಯವಾಗಿದೆ. ಇರಾನ್ ಜನರ ಶಕ್ತಿ ಮತ್ತು ಇಚ್ಛೆಯನ್ನು ಇಸ್ರೇಲ್ ಆಡಳಿತಕ್ಕೆ ತಿಳಿಸುವುದು ಅಧಿಕಾರಿಗಳಿಗೆ ಬಿಟ್ಟದ್ದು. ಈ ದೇಶದ ಹಿತಾಸಕ್ತಿಗಳನ್ನು ಪೂರೈಸಿ ಪೂರ್ಣಗೊಳಿಸುವ ಕ್ರಿಯೆಯನ್ನು ನಿರ್ವಹಿಸುತ್ತೇವೆ ಎಂದು ಹೇಳಿದರು.



Join Whatsapp