ಕ್ಯಾನ್ಸರ್ ವಿರುದ್ಧ ಹೋರಾಟದಲ್ಲಿ ನಾವು ಸೋತಿದ್ದೇವೆ: ಅಪರ್ಣಾ ಪತಿ ನಾಗರಾಜ್ ಕಣ್ಣೀರು

Prasthutha|

ಬೆಂಗಳೂರು: ಖ್ಯಾತ ನಿರೂಪಕಿ ಅಪರ್ಣಾ ನಿಧನಕ್ಕೆ ಕರ್ನಾಟಕ ಕಂಬನಿ ಮಿಡಿದಿದೆ. ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲಿದ ಅಪರ್ಣಾ ಗುರುವಾರ ರಾತ್ರಿ ನಿಧನರಾಗಿದ್ದಾರೆ. ಪತ್ನಿ ಅಪರ್ಣಾ ನಿಧನ ಕುರಿತು ಪತಿ ನಾಗರಾಜ್ ರಾಮಸ್ವಾಮಿ ವತ್ಸಾರೆ ಪ್ರತಿಕ್ರಿಯಿಸಿದ್ದಾರೆ.

- Advertisement -

ಕಳೆದ ಎರಡು ವರುಷದಿಂದ ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ನಾಲ್ಕನೇ ಸ್ಟೇಜ್ ಕ್ಯಾನ್ಸರ್ ಚಿಕಿತ್ದೆ ಪಡೆಯುತ್ತಿದ್ದರು. ಕ್ಯಾನ್ಸರ್ ವಿರುದ್ಧ ಹೋರಾಟದಲ್ಲಿ ನಾವು ಸೋತಿದ್ದೇವೆ ಎಂದು ಅಪರ್ಣಾ ಅವರ ಪತಿ ಕಣ್ಣೀರಿಟ್ಟಿದ್ದಾರೆ.

ಎರಡು ವರ್ಷದ ಹಿಂದೆ ಜುಲೈನಲ್ಲಿ ಅಪರ್ಣಾಗೆ ಶಾಸ್ವಕೋಶ ಕ್ಯಾನ್ಸರ್ ಇರುವುದು ಗೊತ್ತಾಯಿತು. ಮೊದಲು ನೋಡಿದಾಗ ಅಪರ್ಣಾ ಆರು ತಿಂಗಳು ಬದುಕೋದೆ ಡೌಟ್ ಅಂತಾ ವೈದ್ಯರು ಹೇಳಿದ್ದರು. ಆದರೆ ಅಪರ್ಣ ಅವಳು ಛಲಗಾತಿ. ಆಕೆ ಪ್ರತಿ ಬಾರಿ ನಾನು ಬದುಕ್ತೀನಿ ಅಂತಾ ಹೇಳುತ್ತಿದ್ದಳು. ಕಳೆದ ಒಂದೂವರೇ ವರ್ಷದಿಂದ ಛಲದಿಂದ ಬದುಕಿದ್ದಳು. ಅವಳು ಧೀರೆ.. ಇಷ್ಟು ದಿನಾ ಬದುಕಿದ್ದಾಳೆ ಎಂದು ನಾಗರಾಜ್ ಹೇಳಿದ್ದಾರೆ.

- Advertisement -

ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಇದೀಗ ನಾವಿಬ್ಬರು ಜಂಟಿಯಾಗಿ ಸೋತಿದ್ದೇವೆ. ಮುಂಬರುವ ಅಕ್ಟೋಬರ್ ತಿಂಗಳಿಗೆ ಅಪರ್ಣಗೆ 58 ವರ್ಷ ತುಂಬುತಿತ್ತು. ಅವಳ ನಿಜವಾದ ವಯಸ್ಸು ಯಾವತ್ತೂ ತೋರಿಸಲಿಲ್ಲ ಎಂದು ಪತಿ ಹೇಳಿದ್ದಾರೆ.

ಮೂರು ದಿನದ ಹಿಂದೆ ಕ್ಯಾನ್ಸರ್‌ ಉಲ್ಬಣಿಸಿ ಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅಪರ್ಣಾ ನಿನ್ನೆ ರಾತ್ರಿ 9:45 ಕ್ಕೆ ನಿಧನರಾಗಿದ್ದಾರೆ. ಇಂದು ಬನಶಂಕರಿ ಬೆಳಗ್ಗೆ 11:30ರವರೆಗೆ ಬನಶಂಕರಿಯ ಸುಚಿತ್ರಾ ಫಿಲಂ ಸೊಸೈಟಿ ಬಳಿ ಇರುವ ನಿವಾಸದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಆ ಬಳಿಕ ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ವಸ್ತಾರೆ ತಿಳಿಸಿದ್ದಾರೆ.



Join Whatsapp