ನಮ್ಮಲ್ಲಿ ಸಿಎಂ ಆಗಲು ಅರ್ಹತೆ ಇರೋರು 50 ಜನ‌ ಇದ್ದಾರೆ: ಸಚಿವ ಚಲುವರಾಯಸ್ವಾಮಿ

Prasthutha|

ಬೆಂಗಳೂರು: ಮ್ಮಲ್ಲಿ ಮುಖ್ಯಮಂತ್ರಿ ಆಗಲು ಅರ್ಹತೆ ಇರೋರು 50 ಜನ‌ ಇದ್ದಾರೆ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ. ಈಗ ಸಿಎಂ ಸೀಟ್ ಖಾಲಿ ಇಲ್ಲ. ಸಮಯ ಬಂದಾಗ ಹೈಕಮಾಂಡ್ ತೀರ್ಮಾನ ಮಾಡಲಿದೆ, ಅಂತ ಅವರು ಹೇಳಿದ್ದಾರೆ.ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೀಗೆ ಹೇಳಿದರು.

- Advertisement -

ಕಾಂಗ್ರೆಸ್‌ನಲ್ಲಿ ಡಿನ್ನರ್ ಪಾಲಿಟಿಕ್ಸ್ ವಿಚಾರವಾಗಿ ಕೇಳಿದ ಪ್ರಶ್ನೆ ಈ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ರಾಜಕೀಯ ಚರ್ಚೆ ನಾನು ಮಾಡಲ್ಲ, ಅಭಿವೃದ್ಧಿ ಬಗ್ಗೆ ಮಾತನಾಡ್ತೀನಿ. ಹೈಕಮಾಂಡ್ ಇದೆ, ಶಾಸಕಾಂಗ ಸಭೆ ಇದೆ ಅಲ್ಲಿ ತೀರ್ಮಾನ ಮಾಡ್ತಾರೆ. ವಿರೋಧ ಪಕ್ಷದ ಜೊತೆ ಸೇರಿ ಮಾಧ್ಯಮದವರು ಕಾಂಗ್ರೆಸ್ ವಿರುದ್ಧ ಅಪ್ರಚಾರ ಮಾಡ್ತಿದ್ದಾರೆ ಎಂದರು.

ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರ್ತಾರೆ ಎಂಬ ಮಹದೇವಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಅದನ್ನು ಅಲ್ಲಗೆಳೆಯಲಿಲ್ಲ. ಬದಲಿಗೆ, ಮುಖ್ಯಮಂತ್ರಿ ಆಗಲು ಅರ್ಹತೆ ಇರುವವರು 50 ಜನ‌ ಇದ್ದಾರೆ. ಸಮಯ ಬಂದಾಗ ಹೈಕಮಾಂಡ್ ತೀರ್ಮಾನ ಮಾಡಲಿದೆ, ಈಗ ಸಿಎಂ ಸೀಟ್ ಖಾಲಿ ಇಲ್ಲ. ಮಹದೇವಪ್ಪ ಅವರ ಹೇಳಿಕೆ ಬಗ್ಗೆ ಅವರನ್ನೇ ಕೇಳಬೇಕು ಎಂದರು.

- Advertisement -

ಸಿದ್ದರಾಮಯ್ಯ, ಡಿಕೆಶಿ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅವರು ಗಂಭೀರವಾಗಿ ಕೆಲಸ ಮಾಡ್ತಿದ್ದಾರೆ‌. ನಾವುಗಳು ಮಾತನಾಡಿ ಪ್ರಯೋಜನ ಇಲ್ಲ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ.

ಆಣೆ ಪ್ರಮಾಣಕ್ಕೆ ಹೆಚ್ಡಿಕೆ ಆಹ್ವಾನ ವಿಚಾರವಾಗಿ ಪ್ರತಿಕ್ರಿಯಿಸಿ, ಅವರಿಗೆ ಮಾಡಲು ಕೆಲಸವಿಲ್ಲ. ವರ್ಗಾವಣೆಯಲ್ಲಿ ನೇರವಾಗಿ, ಪರೋಕ್ಷವಾಗಿ ನಮ್ಮ ಹೊಣೆ ಇಲ್ಲ ಎಂದು ಧರ್ಮಸ್ಥಳದಲ್ಲಿ ಆಣೆ ಮಾಡಲಿ. ಹಳೆಯದಲ್ಲೇ ಬೇಡ ಇವತ್ತಿನದು ಬೇಕು ಅಂತಾರ? ಆಯ್ತು ಹಳೆಯದು ಬೇಡ 2018ರ 14ತಿಂಗಳು ಆಡಳಿತ ಬಗ್ಗೆಯೇ ಆಣೆ ಮಾಡಲಿ. ದೇವೇಗೌಡರ ಬಗ್ಗೆ ನಾನು ಮಾತನಾಡಲ್ಲ. ಕುಮಾರಸ್ವಾಮಿ ಆಣೆ ಪ್ರಮಾಣದ ವಿಚಾರ ಎತ್ತಿದ್ದಾರೆ ಎಂದರು.



Join Whatsapp