ನಾವು ಇಷ್ಟಪಟ್ಟು ಮದುವೆಯಾಗಿದ್ದೇವೆ, ನಮ್ಮನ್ನು ಕೇಳೋಕೆ ಬಜರಂಗದಳದವರು ಯಾರು?’’

Prasthutha|

ಬಜರಂಗದಳದಿಂದ ಜೀವ ಬೆದರಿಕೆ ಇದೆ ಎಂದ ಚಿಕ್ಕಮಗಳೂರಿನ ಜಾಫರ್-ಚೈತ್ರಾ ಜೋಡಿ

- Advertisement -


ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ದಲಿತ ಯುವತಿ ಮತ್ತು ಮುಸ್ಲಿಮ್ ಯುವಕನ ವಿವಾಹಕ್ಕೆ ತಡೆವೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಾಧ್ಯಮದ ಮುಂದೆ ಜಾಫರ್ ಹಾಗೂ ಚೈತ್ರಾ ಹಾಜರಾಗಿ ಬಜರಂಗದಳ ಕಾರ್ಯಕರ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಈ ಕುರಿತು ಮಾಧ್ಯಮದ ಮುಂದೆ ಪ್ರತಿಕ್ರಿಸಿದ ಚೈತ್ರಾ, ನಾವು ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದೇವೆ. ಇಬ್ಬರು ಇಷ್ಟಪಟ್ಟೇ ಮದುವೆಗೆ ಮುಂದಾಗಿದ್ದೇವೆ. ನಮ್ಮನ್ನು ತಡೆಯೋಕೆ ಈ ಬಜರಂಗಳದವರು ಯಾರು ಎಂದು ಪ್ರಶ್ನಿಸಿದ್ದಾರೆ.

- Advertisement -


ಬಜರಂಗದಳ ಕಾರ್ಯಕರ್ತರು ನನ್ನನ್ನು ಎಳೆದಾಡಿ, ಕೆಟ್ಟದಾಗಿ ಬೈದು, ನನ್ನ ಗಂಡನಿಗೆ ಹಲ್ಲೆ ಮಾಡಿದ್ದಾರೆ. ಹಿಂದೂ ಹುಡುಗಿ ಬೇಕಾ..? ಎಸ್ಸಿ ಹುಡುಗಿ ಬೇಕಾ ಎಂದು ಪತಿಯನ್ನು ಥಳಿಸಿದ್ದಾರೆ. ಆ ದಿನ ಬಜರಂಗದಳದವರು ಏನಾದರೂ ಮಾಡುತ್ತಾರೆಂದು ಪೊಲೀಸರು ನನ್ನನ್ನು ಮನೆಗೆ ಕಳುಹಿಸಲಿಲ್ಲ. ಮನೆಗೆ ಕಳುಹಿಸದೇ ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದಾರೆ ಎಂದು ಆರೋಪಿಸಿದರು.


ಆರೋಪಿಗಳ ವಿರುದ್ಧ ಕಠಿಣ ಸೆಕ್ಷನ್ ಗಳನ್ನು ಹಾಕುವ ಬದಲು ಸ್ಟೇಷನ್ ಬೇಲ್ ಕೊಟ್ಟು ಕಳುಹಿಸಿದ್ದಾರೆ. ನಮ್ಮ ಮೇಲೆ ಹಲ್ಲೆ ಮಾಡಿ, ಕೆಟ್ಟದಾಗಿ ಬೈದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಪೋಲಿಸ್ ಇಲಾಖೆ ವಿರುದ್ಧ ಜಾಫರ್-ಚೈತ್ರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.



Join Whatsapp