ನಪುಂಸಕರನ್ನು ರಾಜ್ಯದಿಂದ ಲೋಕಸಭೆಗೆ ಆರಿಸಿ ಕಳಿಸಿದ್ದೇವೆ: ಸಚಿವ ಕೆಎನ್ ರಾಜಣ್ಣ

Prasthutha|

ಹಾಸನ: ಕರ್ನಾಟಕದಿಂದ ಆಯ್ಕೆಯಾಗಿ ಸಂಸತ್ತಿಗೆ ಹೋಗಿರುವ ಒಬ್ಬ ಸಂಸದನಾದರೂ ಪಾರ್ಲಿಮೆಂಟ್‌ ಒಳಗೆ ಆಗಲಿ, ಹೊರಗಡೆ ಆಗಲಿ ನಮ್ಮ ರಾಜ್ಯಕ್ಕೆ ಏನೆಲ್ಲ ಅನುಕೂಲ ನೀಡಬೇಕೋ ಅದನ್ನು ಕೊಡಿ ಎಂದು ಕೇಳಿಲ್ಲ. ಇಂತಹ ನಪುಂಸಕರನ್ನು ರಾಜ್ಯದಿಂದ ಲೋಕಸಭೆಗೆ ಆರಿಸಿ ಕಳಿಸಿದ್ದೇವೆ. ಇದು ನಮಗೆಲ್ಲ ಅವಮಾನ ಎಂದು ಬಿಜೆಪಿ ಸಂಸದ ವಿರುದ್ಧ ಸಚಿವ ಕೆಎನ್ ರಾಜಣ್ಣ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

- Advertisement -

ಹಾಸನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರನ್ನು ಬೆಂಬಲಿಸುವ ಕುರಿತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಸಚಿವ, ಹತ್ತು ವರ್ಷಗಳು ನರೇಂದ್ರ ಮೋದಿಯವರು ಬರೀ ಸುಳ್ಳು ಹೇಳಿದರೆ ಹೊರತು ಬೇರೆ ಏನೂ ಮಾಡಲಿಲ್ಲ. ಎರಡು ಕೋಟಿ ಉದ್ಯೋಗ ನೀಡಲಿಲ್ಲ. ಹದಿನೈದು ಲಕ್ಷ ಹಣ ಕೊಡಲಿಲ್ಲ ಎಂದು ಕೇಂದ್ರದ ವಿರುದ್ಧ ಹರಿಹಾಯ್ದರು.

ನಮ್ಮಿಂದ ತೆರಿಗೆ ಸಂಗ್ರಹಿಸುವ ಕೇಂದ್ರ ಸರ್ಕಾರ ನಮ್ಮ ಪಾಲು ನಮಗೆ ನೀಡಲು ಮಲತಾಯಿ ಧೋರಣೆ ಮಾಡುತ್ತಿದೆ. ನಮ್ಮ ರಾಜ್ಯದ ಯಾವುದೇ ಸಮಸ್ಯೆ ಲೋಕಸಭೆಯಲ್ಲಿ ಚರ್ಚೆಯಾಗಿಲ್ಲ. ಇಲ್ಲಿಂದ ಆಯ್ಕೆಯಾಗಿ ಹೋದ ಯಾವ ಸಂಸದನೂ ಕೇಂದ್ರದ ಬಳಿ ಬರಿಪರಿಹಾರ ಕೇಳುವ ಧೈರ್ಯ ಮಾಡುತ್ತಿಲ್ಲ. ಇಂಥ ನಪುಂಸಕರನ್ನ ಆರಿಸಿ ಕಳಿಸಿದ್ದಕ್ಕೆ ನಮಗೆ ಅವಮಾನ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Join Whatsapp