ಖಾದರ್ ಎಂಬ ಬೋಳಪ್ಪ ಇದ್ದಾನೆಂದು ನಾವು ಗೌರವ ಕೊಡಲ್ಲ: ಈಶ್ವರಪ್ಪ

Prasthutha|

ಶಿವಮೊಗ್ಗ: ಜಮೀರ್ ಅಹಮ್ಮದ್ ತೆಲಂಗಾಣದಲ್ಲಿ ಪ್ರಚಾರಕ್ಕೆ ಹೋದಾಗ ಸರ್ಕಾರದ ಸಭಾಧ್ಯಕ್ಷ ಪೀಠಕ್ಕೆ ಅಪಮಾನ ಮಾಡಿದ್ದಾರೆ. ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಸಭಾಧ್ಯಕ್ಷರಿಗೆ ಎಲ್ಲರೂ ತಲೆಬಾಗಿ ವಿಧಾನಸಭೆ ಚಟುವಟಿಕೆ ನಡೆಸಬೇಕು. ಮುಸ್ಲಿಂ ನಾಯಕರಿಗೆ ತಲೆಬಾಗಬೇಕು ಎಂಬುದಕ್ಕೆ ನನ್ನ ವಿರೋಧವಿದೆ. ಸಂವಿಧಾನ ಪೀಠಕ್ಕೆ, ಸ್ಪೀಕರ್ ಸ್ಥಾನಕ್ಕೆ ನಾವು ಮರ್ಯಾದೆ ಕೊಡುವುದು. ಖಾದರ್ ಎಂಬ ಬೋಳಪ್ಪ ಇದ್ದಾನೆಂದು ನಾವು ಗೌರವ ಕೊಡಲ್ಲ. ಸಂವಿಧಾನ ಪೀಠಕ್ಕೆ, ಸ್ಪೀಕರ್ ಖಾದರ್ ಗೆ ನಾವು ಗೌರವ ಕೊಡುತ್ತೇವೆ. ಒಂದು ಹಳ್ಳಿಯಲ್ಲಿ ಕತ್ತೆ ಮೇಲೆ ದೇವರು ಕೂರಿಸಿಕೊಂಡು ಮೆರವಣಿಗೆ ಮಾಡುತ್ತಿದ್ದರು. ಕತ್ತೆಗಲ್ಲಾ ನಾವು ಮರ್ಯಾದೆ ಕೊಡುತ್ತಿರುವುದು, ಬದಲಾಗಿ ದೇವರಿಗೆ ಮರ್ಯಾದೆ ಎಂದರು.




Join Whatsapp