ಆಪರೇಷನ್ ಕಮಲದ ಅಗತ್ಯ ನಮಗಿಲ್ಲ, ಪಕ್ಷಕ್ಕೆ ಬರುವವರನ್ನು ಬರಮಾಡಿಕೊಳ್ಳುತ್ತಿದ್ದೇವೆ ಎಂದ ಸಂಸದ ನಳಿನ್

Prasthutha|

ಮಂಗಳೂರು: ಆಪರೇಷನ್ ಕಮಲದ ಅಗತ್ಯ ನಮಗಿಲ್ಲ, ಪಕ್ಷಕ್ಕೆ ಬರುವವರನ್ನು ಬರ ಮಾಡಿಕೊಳ್ಳುತ್ತಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ , ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

- Advertisement -

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ಯಾವುದೇ ಆಪರೇಶನ್ ಕಮಲ ನಡೆದಿಲ್ಲ. ಪಕ್ಷದ ನೀತಿ, ಸಿದ್ಧಾಂತ ಮೆಚ್ಚಿದವರು ಪಕ್ಷಕ್ಕೆ ಬರುತ್ತಾರೆ ಎಂದು ಹೇಳಿದ್ದಾರೆ.

ಮೀಸಲಾತಿ ಬಿಟ್ಟಾದರೂ ಚುನಾವಣೆ ನಡೆಸಬೇಕು ಎಂದು ಮಧ್ಯಪ್ರದೇಶಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಆದೇಶ ನೀಡಿದೆ. ಆದರೆ ನಾವು ಹಿಂದುಳಿದವರಿಗೆ ನ್ಯಾಯ ಒದಗಿಸಿ ಚುನಾವಣೆ ಎದುರಿಸಲು ಸಿದ್ಧ ಎಂದು ಅವರು ಹೇಳಿದ್ದಾರೆ. ರಾಜ್ಯದಲ್ಲಿ ಜಿಲ್ಲಾ ಪಂಚಾಯತ್,ತಾಲೂಕು ಪಂಚಾಯತ್ ಯಾವುದೇ ಇದ್ದರೂ ನಾವು ಸರ್ವ ರೀತಿಯಿಂದ ಚುನಾವಣೆಗೆ ತಯಾರಾಗಿದ್ದೇವೆ. ಮೋದಿಯವರ ಸರಕಾರ ಮತ್ತು ಬೊಮ್ಮಾಯಿಯವರ ಸರಕಾರಗಳು ಹಿಂದುಳಿದವರಿಗೆ ಎಲ್ಲ ರೀತಿಯ ನೆರವು ನೀಡಿದೆ. ಈಗ ಪೇಜ್ ಪ್ರಮುಖ ಮಟ್ಟದಿಂದಲೂ ನಮ್ಮ ತಯಾರಿ ಇದೆ ಎಂದು ನಳಿನ್ ಕುಮಾರ್ ಹೇಳಿದರು.

- Advertisement -

ಹಿಂದುಳಿದವರಿಗೆ ನ್ಯಾಯ ಸಲ್ಲಿಸಲು ನಾವು ಬದ್ಧರಾಗಿದ್ದೇವೆ. ನಮ್ಮ ವಿಚಾರಧಾರೆಯನ್ನು ಒಪ್ಪಿ ಅನೇಕರು ಪಕ್ಷಕ್ಕೆ ಬರುವಾಗ , ಸ್ಥಳೀಯವಾಗಿ ವಿರೋಧ ಬರುವುದು ಸಹಜ ಆದರೆ ಅವರು ಪಕ್ಷಕ್ಕೆ ಬಂದ ಮೇಲೆ ಸಿದ್ದಾಂತ ಒಪ್ಪಿ ನಡೆಯಬೇಕು ಎಂದಿದ್ದಾರೆ.

ಪಿಎಸ್ಸೈ ಹಗರಣದಲ್ಲಿ ಪಾರದರ್ಶಕ ತನಿಖೆ ಆಗುತ್ತಿದ್ದು ಭ್ರಷ್ಟಾಚಾರವನ್ನು ಸಹಿಸುವುದಿಲ್ಲ, ಹಲವರನ್ನ ಬಂಧಿಸುವ ಕೆಲಸವಾಗಿದ್ದು ಇನ್ನು ಕೂಡ ಕ್ರಮ ಆಗಲಿದೆ ಎಂದು ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡಬಿದಿರೆ, ಕಸ್ತೂರಿ ಪಂಜ, ರವಿಶಂಕರ್ ಮಿಜಾರ್ ಮೊದಲಾದವರು ಉಪಸ್ಥಿತರಿದ್ದರು.



Join Whatsapp