ಬೆಂಗಳೂರು: ಬಿಜೆಪಿ ಅವರು ಹೇಳಿದಂತೆ ನಾವು ಕೇಳೋಕೆ ಶುರು ಮಾಡಿದ್ರೆ, ನಾವು ಆಡಳಿತ ಮಾಡೋಕೆ ಆಗಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಕಿಡಿಕಾರಿದ್ದಾರೆ.
ಹಾವೇರಿ ಕೇಸ್ ಪ್ರಕರಣದಲ್ಲಿ ಎಸ್ ಐಟಿ ರಚನೆಗೆ ಆಗ್ರಹಿಸಿದ ವಿಚಾರ ಹಾಗೂ ಕೇಸ್ ಗೆ ಸಂಬಂಧಿಸಿದವರ ಬಂಧನ ಆಗಿದೆ ಎಂಬ ಸಂತ್ರಸ್ತೆ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಗ ತನಿಖೆ ಆಗುತ್ತಿದೆ. ಸಂಪೂರ್ಣ ತನಿಖೆ ಆಗಲಿ. ಅಲ್ಲಿಯವರೆಗೂ ನಾನೇನು ಹೇಳಲ್ಲ. ಈಗಾಗಲೇ 7-8 ಜನ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ. ಈ ಮಧ್ಯೆ ಸಂತ್ರಸ್ತೆ ಊರಿಗೆ ಹೋಗಬೇಕು ಅಂದಿದ್ದಾರೆ. ಅದಕ್ಕೆ ಕಳುಹಿಸಲಾಗಿದೆ. ತನಿಖೆ ಆಧಾರದಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ. ಪ್ರಕರಣ ಸಂಬಂಧ ಸ್ಥಳೀಯ ಇನ್ಸ್ಪೆಕ್ಟರ್ ನನ್ನು ಅಮಾನತು ಮಾಡಲಾಗಿದೆ. ತನಿಖೆ ವರದಿ ಬರಲಿ ಮುಂದೆ ನೋಡೋಣ ಎಂದರು.