ಬ್ಯಾರಿಕೇಡ್‌ ಭೇದಿಸಿದ್ದೇವೆ, ಕಾನೂನು ಉಲ್ಲಂಘಿಸಿಲ್ಲ: ರಾಹುಲ್‌

Prasthutha|

ಗವಾಹಟಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದ ಭಾರತ ಜೋಡೊ ನ್ಯಾಯ ಯಾತ್ರೆಯನ್ನು ಗುವಾಹಟಿ ನಗರ ಪ್ರವೇಶಿಸಿದಂತೆ ತಡೆಹಿಡಿಯಲಾಗಿದ್ದು, ಆಕ್ರೋಶಗೊಂಡ ಪಕ್ಷದ ಕಾರ್ಯಕರ್ತರು ಬ್ಯಾರಿಕೇಡ್‌ಗಳನ್ನು ಭೇದಿಸಿ, ಘೋಷಣೆಗಳನ್ನು ಕೂಗಿದ ಘಟನೆ ನಡೆದಿದೆ.

- Advertisement -

ಭಾರತ ಜೋಡೊ ನ್ಯಾಯ ಯಾತ್ರೆಯು ನಗರವನ್ನು ಪ್ರವೇಶಿಸಿದಂತೆ ಪೊಲೀಸರು ಎರಡು ಸ್ಥಳಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದರು. ಅಲ್ಲದೆ, ಕಾಂಗ್ರೆಸ್‌ ಬೆಂಬಲಿಗರನ್ನು ನಿಯಂತ್ರಿಸಲು ಪೊಲೀಸರು ಬಲ ಪ್ರಯೋಗ ನಡೆಸಿದ್ದಾರೆ.

ಘಟನೆಯ ನಂತರ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ, ನಾವು ಬ್ಯಾರಿಕೇಡ್‌ಗಳನ್ನು ಭೇದಿಸಿದ್ದೇವೆ ಹೊರತು ಕಾನೂನನ್ನು ಉಲ್ಲಂಘಿಸಿಲ್ಲ ಎಂದು ಹೇಳಿದ್ದಾರೆ.

- Advertisement -

ಕಾಂಗ್ರೆಸ್‌ ಕಾರ್ಯಕರ್ತರು ಯಾರಿಗೂ ಹೆದರುವುದಿಲ್ಲ. ಅಸ್ಸಾಂನಲ್ಲಿ ಬಿಜೆಪಿಯನ್ನು ಸೋಲಿಸಿ ಶೀಘ್ರದಲ್ಲೇ ಕಾಂಗ್ರೆಸ್‌ ಸರ್ಕಾರ ರಚಿಸುತ್ತದೆ ಎಂದು ಹೇಳಿದ ರಾಹುಲ್‌ ಗಾಂಧಿ, ಪೊಲೀಸರು ತಮ್ಮ ಕೆಲಸವನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದ್ದಾರೆ..

ಬಳಿಕ ರಿಂಗ್‌ ರಸ್ತೆಯಲ್ಲಿ ನಿಗದಿತ ಮಾರ್ಗದ ಮೂಲಕ ಯಾತ್ರೆ ಮುಂದುವರಿಸಿದರು. ಸೋಮವಾರ ಮೇಘಾಲಯವನ್ನು ಪ್ರವೇಶಿಸಿದ್ದ ಯಾತ್ರೆಯು ಗುವಾಹಟಿಯ ಮೂಲಕ ಅಸ್ಸಾಂಗೆ ಮತ್ತೆ ಪ್ರವೇಶಿಸಿತ್ತು. ಗುರುವಾರದವರೆಗೆ ಯಾತ್ರೆ ಅಸ್ಸಾಂನಲ್ಲಿ ಇರಲಿದೆ.



Join Whatsapp