ಪಂಚಾಯತ್ ಚುನಾವಣೆಗಳಲ್ಲಿ ಟಿಎಂಸಿಗೆ ಜಯ: ಪಶ್ಚಿಮ ಬಂಗಾಳ ಜನರ ಹೃದಯದಲ್ಲಿರುವುದು ನಾವು ಮಾತ್ರ ಎಂದ ಮಮತಾ ಬ್ಯಾನರ್ಜಿ

Prasthutha|

ಕೋಲ್ಕತ್ತ: ಪಶ್ಚಿಮ ಬಂಗಾಳ ಪಂಚಾಯಿತಿ ಚುನಾವಣೆಗಳಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷ (ಟಿಎಂಸಿ) ಭಾರಿ ಗೆಲುವು ಸಾಧಿಸಿರುವುದಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯದ ಜನರಿಗೆ ಮಂಗಳವಾರ ಧನ್ಯವಾದ ಹೇಳಿದ್ದಾರೆ.

- Advertisement -


ಬಂಗಾಳದ ಗ್ರಾಮೀಣ ಭಾಗದಲೆಲ್ಲಾ ಟಿಎಂಸಿ ಇದೆ. ಟಿಎಂಸಿಗೆ ಇಷ್ಟು ಪ್ರೀತಿ, ವಿಶ್ವಾಸ ಮತ್ತು ಬೆಂಬಲ ನೀಡಿದ ಜನರಿಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ರಾಜ್ಯದ ಜನರ ಹೃದಯದಲ್ಲಿರುವುದು ಟಿಎಂಸಿ ಮಾತ್ರ ಎಂಬುದನ್ನು ಈ ಚುನಾವಣೆ ಸಾಬೀತು ಮಾಡಿದೆ’ ಎಂದು ತಮ್ಮ ಫೇಸ್ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.
ಮತಪತ್ರಗಳ ಎಣಿಕೆ ಸದ್ಯಕ್ಕೆ ಪೂರ್ಣಗೊಂಡಿಲ್ಲ. ‘ಇನ್ನೂ 2 ದಿನ ಎಣಿಕೆ ನಡೆಯಬಹುದು’ ಎಂದು ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿಗಳ 63,229 ಸ್ಥಾನಗಳಿಗೆ ಚುನಾವಣೆ ನಡೆದಿತ್ತು.


ಮಂಗಳವಾರ ರಾತ್ರಿ 10.30ರ ವರೆಗಿನ ಫಲಿತಾಂಶದ ಪ್ರಕಾರ, ತೃಣಮೂಲ ಕಾಂಗ್ರೆಸ್ ಒಟ್ಟು 29,665 ಗ್ರಾಮ ಪಂಚಾಯಿತಿ ಸ್ಥಾನಗಳನ್ನು ಪಡೆದಿದ್ದು, 1,527 ಕಡೆ ಮುನ್ನಡೆ ಪಡೆದಿದೆ. ಬಿಜೆಪಿ 8,021 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. 406 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.

Join Whatsapp