ನಾವು ಮೂರ್ಖರೇ, ನಾವು ರಾಜ್ಯದ ರೈತರ ಹಿತ ಕಾಯಲು ನಿಂತಿದ್ದೇವೆ: ಯಡಿಯೂರಪ್ಪಗೆ ಡಿಕೆಶಿ ತಿರುಗೇಟು

Prasthutha|

ಬೆಂಗಳೂರು: ತಮಿಳುನಾಡಿಗೆ ನೀರು ಬಿಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಮೂರ್ಖ ಸರ್ಕಾರ ಎಂದು ಜರಿದಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ಡಿಸಿಎಂ ಡಿಕೆ ಶಿವಕುಮಾರ್, ನಾವು ಮೂರ್ಖರೇ, ನಾವು ರಾಜ್ಯದ ರೈತರ ಹಿತ ಕಾಯಲು ನಿಂತಿದ್ದೇವೆ ಎಂದಿದ್ದಾರೆ.

- Advertisement -


ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬೆಂಗಳೂರು ಬಂದ್ ಮಾಡುವುದು ಬೇಡ, ಯಾವ ಲಾಭಕ್ಕಾಗಿ ಮಾಡುತ್ತಾರೆ? ಬೆಂಗಳೂರು ಬಂದ್ ಮಾಡುವುದರಿಂದ ಯಾವುದೇ ಅನುಕೂಲ ಆಗಲ್ಲ. ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರವೇ ಹೋರಾಟಕ್ಕೆ ನಿಂತಿದೆ. ಬೆಂಗಳೂರು ಮರ್ಯಾದೆ ಹಾಳು ಮಾಡಿದರೆ ನೀವೇ ಚುಚ್ಚಿಕೊಂಡಂತೆ. ಬೆಂಗಳೂರಲ್ಲಿ ಎಲ್ಲಾ ಭಾಷೆ, ಬೇರೆ ಬೇರೆ ರಾಜ್ಯಗಳ ಜನ ವಾಸವಾಗಿದ್ದಾರೆ ಎಂದರು.

Join Whatsapp