ನಾವೆಲ್ಲರೂ ಹುಟ್ಟಿರುವುದು ಹಿಂದೂ ರಾಷ್ಟ್ರದಲ್ಲಿ: ವಿವಾದಾತ್ಮಕ ಹೇಳಿಕೆ ನೀಡಿದ ಮಿಥುನ್ ರೈ

Prasthutha|

ಮಂಗಳೂರು: ನಾವೆಲ್ಲರೂ ಹುಟ್ಟಿರುವುದು ಹಿಂದೂ ರಾಷ್ಟ್ರದಲ್ಲಿ ಅದನ್ನು ನಾವು ಎದೆತಟ್ಟಿ ಹೇಳುತ್ತೇವೆ ಎಂದು ಮುಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

- Advertisement -

ಖಾಸಗಿ ಸುದ್ದಿ ವಾಹಿನಿಯೊಂದರ ಚುನಾವಣಾ ಚರ್ಚಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಮಿಥುನ್ ರೈ ನಾವೆಲ್ಲರೂ ಹುಟ್ಟಿರುವುದು ಹಿಂದೂ ರಾಷ್ಟ್ರದಲ್ಲಿ ಅದನ್ನು ಎದೆತಟ್ಟಿ ಹೇಳುತ್ತೇನೆ ನಾನು ” ಎಂದು ಹೇಳಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಆರ್ ಎಸ್ ಎಸ್ ಹಾಗೂ ಸಂಘ ಪರಿವಾರದ ಮುಖಂಡರು ಮಾತನಾಡುವಂತೆ ಮಿಥುನ್ ರೈ ಮಾತನಾಡಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.



Join Whatsapp